Publish Date: Thu, 27 Jun 2019 (20:00 IST)
Updated Date: Thu, 27 Jun 2019 (20:04 IST)
ಇನ್ನೇನು ಜೀವ ಹೋಗೇ ಬಿಟ್ಟಿತು ಎನ್ನುವಷ್ಟರಲ್ಲಿ ಆಶ್ಚರ್ಯಕರ ರೀತಿಯಲ್ಲಿ ಜೀವ ಉಳಿದ ಘಟನೆ ನಡೆದಿದೆ.
ತುಂಬಿ ಹರಿಯುತ್ತಿರುವ ಕೋಡಿಹೊಳೆಯಲ್ಲಿ ಹಸುವೊಂದು ಆಕಸ್ಮಿಕವಾಗಿ ಬಿದ್ದು ಬದುಕುಳಿದ ಘಟನೆ ನಡೆದಿದೆ.
ಗಂಗೊಳ್ಳಿಯ ಹೊಳೆಯಲ್ಲಿ ಮುಳುಗುತ್ತಿದ್ದ ಹಸುವನ್ನು ರಕ್ಷಿಸಿದ್ದಾರೆ ಮೀನುಗಾರರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಗಂಗೊಳ್ಳಿಯ ಕೋಡಿ ಹೊಳೆಯಲ್ಲಿ ಆಕಸ್ಮಿಕವಾಗಿ ಹೊಳೆಗೆ ಬಿದ್ದ ಹಸುವನ್ನು ಹೊಳೆಯ ನಡುವೆಯೇ ಮೀನುಗಾರರು ರಕ್ಷಿಸಿದ ಘಟನೆ ನಡೆದಿದೆ.
ಹಸು ಹೊಳೆಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಹಲವರಿಗೆ ವಿಷಯ ತಿಳಿಸಿದ್ದಾರೆ. ಆಗ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು ಹಾಗೂ ಅಣ್ಣಪ್ಪ ಎನ್ನುವವರು ಕೂಡಲೇ ದೋಣಿ ಮೂಲಕ ಹೊಳೆಯಲ್ಲಿ ಸಾಗಿ ಜೀವದ ಹಂಗನ್ನೆ ತೊರೆದು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದಿಷ್ಟು ಸ್ಥಳೀಯ ಜನರು ಇವರಿಗೆ ಸಹಕಾರ ನೀಡಿದರು. ಈಗ ಗೋವನ್ನು ರಕ್ಷಣೆ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.