ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ನೀರು ಬಿಟ್ಟ ಶಾಸಕ

ಸೋಮವಾರ, 24 ಜೂನ್ 2019 (16:23 IST)
ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಾಸಕರೊಬ್ಬರು ನೀರು ಬಿಟ್ಟಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒಂದು ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟಿಕರಣ ಕಾಮಗಾರಿ ವೇಳೆ ಇದು ನಡೆದಿದೆ.

ಕಾಮಗಾರಿಯನ್ನು ಶಾಸಕ ಡಾ.ನಾರಾಯಣಗೌಡ ವೀಕ್ಷಿಸಿದರು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಕಾಂಕ್ರೀಟ್ ಕಾಮಗಾರಿಯ ಕ್ಯೂರಿಂಗ್ ಬಗ್ಗೆ ಆಕ್ಷೇಪವನ್ನು ಶಾಸಕರು ವ್ಯಕ್ತಪಡಿಸಿದರು. ಶಾಸಕ ನಾರಾಯಣಗೌಡ  ಅವರೇ ನೀರಿನ ಪೈಪನ್ನು ಕೈಯಲ್ಲಿ ಹಿಡಿದುಕೊಂಡರು. ನೀರನ್ನು ಕಾಂಕ್ರಿಟ್ ಕಾಮಗಾರಿಗೆ ಸಿಂಪಡಿಸಿ ತೋರಿಸಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಚಿವ ಡಿಕೆಶಿಗೆ ತಿರುಗೇಟು ನೀಡಿದ ಶ್ರೀರಾಮುಲು