Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ಶಾಕ್: ಕುಡಿಯುವ ನೀರಿನ ಯೋಜನೆ ಜಾರಿ ಬೇಡ ಎಂದೋರಾರು?

ಬೆಂಗಳೂರಿಗೆ ಶಾಕ್: ಕುಡಿಯುವ ನೀರಿನ ಯೋಜನೆ ಜಾರಿ ಬೇಡ ಎಂದೋರಾರು?
ಬೆಂಗಳೂರು , ಶನಿವಾರ, 22 ಜೂನ್ 2019 (15:50 IST)
ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶದಿಂದ 30 ಟಿಎಂಸಿ ನೀರನ್ನು ತರಲು ರಾಜ್ಯ ಸರ್ಕಾರ ಡಿಪಿಆರ್ ತಯಾರಿಸಲು ಸಿದ್ದವಾಗಿದ್ದು, ಈ ಯೋಜನೆ ಜಾರಿ ಬೇಡ ಅಂತ ಶಾಸಕರೊಬ್ಬರು ಸಿಎಂಗೆ ಹೇಳಿದ್ದಾರೆ.

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶದಿಂದ 30 ಟಿಎಂಸಿ ನೀರನ್ನು ತರಲು ರಾಜ್ಯ ಸರ್ಕಾರ ಡಿಪಿಆರ್ ತಯಾರಿಸಲು ಸಿದ್ದವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಜಾರಿ ತರಬಾರದೆಂದು.

ಹೀಗಂತ ಸಾಗರ- ಹೊಸನಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನೇತೃತ್ವದ  ನಿಯೋಗ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಈಗಾಗಲೇ ಸಾಗರ-ಹೊಸನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು, ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಜೊತೆಗೆ 400 ಕಿಲೋಮೀಟರ್ ದೂರದಿಂದ ನೀರು ತರಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿ ಗಳಿಗೆ ಶಾಸಕ ಹಾಲಪ್ಪ ಮನವರಿಕೆ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗ್ರಾಮವಾಸ್ತವ್ಯ ದಿಢೀರ್ ರದ್ದು; ಕಾರಣ ಏನು?