Select Your Language

Notifications

webdunia
webdunia
webdunia
webdunia

ಮೊಡವೆಗಳ ಸಮಸ್ಯೆಯಿಂದ ಮುಕ್ತಿಹೊಂದಲು ಈ ಹಣ್ಣುಗಳನ್ನು ಸೇವಿಸಿ

ಮೊಡವೆಗಳ ಸಮಸ್ಯೆಯಿಂದ ಮುಕ್ತಿಹೊಂದಲು ಈ ಹಣ್ಣುಗಳನ್ನು ಸೇವಿಸಿ
ಬೆಂಗಳೂರು , ಶನಿವಾರ, 22 ಜೂನ್ 2019 (10:14 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಹಣ್ಣುಗಳನ್ನು ಸೇವಿಸುವವರು ಆರೋಗ್ಯವಂತರಾಗಿರುತ್ತಾರೆ. ಅದೇರೀತಿ ಕೆಲವು ಹಣ್ಣುಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಹೌದು ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ಮೊಡವೆಗಳ ಸಮಸ್ಯೆಯಿಂದ ಮುಕ್ತಿಹೊಂದಬಹುದು.




*ಸೇಬುಹಣ್ಣು: ಇದರಲ್ಲಿ ವಿಟಮಿನ್ ಸಿ, ಇ ಮತ್ತು ಎ ಇರುವುದರಿಂದ ನಿಮ್ಮ ಚರ್ಮವನ್ನು ಬೆಳ್ಳಗೆ, ಮೃದುವಾಗಿಡುತ್ತದೆ. ಸೇಬುಹಣ್ಣನ್ನು ತಿನ್ನುವುದರ ಜೊತೆಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.


*ಬಾಳೆಹಣ್ಣು : ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ಬಾಳೆಹಣ್ಣು ನಾಶ ಮಾಡುತ್ತದೆ. ಚರ್ಮವನ್ನು ಮೃದುವಾಗಿ, ಕಾಂತಿಯುಕ್ತವಾಗಿಡುತ್ತದೆ. ಬಾಳೆಹಣ್ಣನ್ನು ಕೂಡ ತಿನ್ನುವುದರ ಜೊತೆಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.


*ಪಪ್ಪಾಯ : ಇದರಲ್ಲಿ ವಿಟಮಿನ್ ಎ ಅಧಿಕವಾಗಿದೆ. ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಉರಿಯೂತ ಮತ್ತು ಚರ್ಮ ಕೆಂಪಗಾಗುವಿಕೆ ಕಡಿಮೆಯಾಗುತ್ತದೆ


*ಅವೊಕಾಡೊ : ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಅವೊಕಾಡೊ ಆಯಂಟಿಒಕ್ಸಿಡೆಂಟ್ ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಈ ಕೆಟ್ಟ ಅಭ್ಯಾಸದಿಂದ ನಿಮಗೆ ಪೈಲ್ಸ್ ಬರುವುದು ಖಚಿತ