17 ಟನ್ ಇರುವ ಟ್ರಕ್ ನ್ನು ಒಂದು ಗಂಟೆಗಳ ಕಾಲ ಎತ್ತಿ ಹಿಡಿದಿದೆಯಂತೆ ಈ ಅಂಟು

ಗುರುವಾರ, 1 ಆಗಸ್ಟ್ 2019 (09:13 IST)
ಜರ್ಮನಿ : ಜರ್ಮನಿಯ ಕಂಪೆನಿಯೊಂದು ತಯಾರಿಸಿದ ಅಂಟೊಂದು 17 ಟನ್ ಇರುವ  ಟ್ರಕ್ ನ್ನು ಒಂದು ಗಂಟೆಗಳ ಕಾಲ ಎತ್ತಿ ಹಿಡಿದು ಗಿನ್ನಿಸ್ ರೆಕಾರ್ಡ್ ಮಾಡಿದೆ.
ಜರ್ಮನಿಯ ಅಂಟು ಉತ್ಪಾದನಾ ಕಂಪೆನಿಯಾದ ಡೆಲೋ,  ಹೆಚ್ಚಿನ ತಾಪಮಾನ-ನಿರೋಧಕ ಡೆಲೊ ಮೊನೊಪಾಕ್ಸ್ ಎನ್ನುವ ಅಂಟನ್ನು ತಯಾರಿಸಿದ್ದು, ಅದರ ಮೂಲಕ ಜುಲೈ 12ರಂದು ಈ ದಾಖಲೆಯನ್ನು ಮಾಡಲಾಗಿದೆ. ಕೇವಲ 3 ಗ್ರಾಮ್ ಅಂಟನ್ನು ಒಂದು ಚಿಕ್ಕ ಅಲ್ಯೂಮಿನಿಯಂ ಸಿಲಿಂಡರ್‌ ಗೆ ಅಂಟಿಸಿ ಅದನ್ನು ಕ್ರೇನ್ ಅನ್ವಯಿಸಿ ಅದರ ಮುಖಾಂತರ ಲಾರಿಯನ್ನು ಎತ್ತಲಾಗಿದೆ. ಈ ಘಟನೆಗೆ ನಿರ್ಣಯಿಸಲು ಅಲ್ಲಿನ  ಸ್ಥಳೀಯ ರಾಜಕಾರಣಿಗಳು ಹಾಗೂ ನ್ಯಾಯಾಧೀಶರು ಬಂದಿದ್ದಾರಂತೆ.


ಈ ಅಂಟಿನ ಗುಂಪಿನಲ್ಲಿರುವ ಒಂದು ಘಟಕ ಶಾಖ ಕಡಿಮೆ ಮಾಡುವ ಎಪಾಕ್ಸಿ ರಾಳಗಳು ಹೆಚ್ಚಿನ ಶಕ್ತಿಗೆ ಹೆಸರುವಾಸಿಯಾಗಿವೆ.  ಅವುಗಳನ್ನು ಅಟೋಮೋಟಿವ್ ಉದ್ಯಮ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಳಸಲಾಗುತ್ತದೆ ಎಂದು ಆ ಕಂಪೆನಿಯವರು ತಿಳಿಸಿದ್ದಾರೆ. ಹಾಗೇ ಈ ಅಂಟು ಮಾರಾಟಕ್ಕೆ ಲಭ್ಯವಿಲ್ಲವಂತೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿ.ಎಸ್‌.ಎನ್‌.ಎಲ್‌ ಹಾಗೂ ಎಂ.ಟಿ.ಎನ್‌.ಎಲ್‌ ಕಂಪೆನಿಗಳ ವಿಲೀನಕ್ಕೆ ಮುಂದಾದ ಟೆಲಿಕಾಂ ಇಲಾಖೆ