Select Your Language

Notifications

webdunia
webdunia
webdunia
webdunia

ನೇರಳೆ ಹಣ್ಣಿನಿಂದ ಮುಖದ ಅಂದ ಹೆಚ್ಚಿಸಿಕೊಳ‍್ಳುವುದು ಹೇಗೆ ಗೊತ್ತಾ?

ನೇರಳೆ ಹಣ್ಣಿನಿಂದ ಮುಖದ ಅಂದ ಹೆಚ್ಚಿಸಿಕೊಳ‍್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 11 ಜುಲೈ 2019 (09:43 IST)
ಬೆಂಗಳೂರು : ನೇರಳೆ ಹಣ್ಣು ತಿನ್ನಲು ಬಲು ರುಚಿ. ಅಷ್ಟೇ ಅಲ್ಲದೇ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ ಇದರಿಂದ ಚರ್ಮದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.




*ಮೊಡವೆಗಳ ಸಮಸ್ಯೆಗೆ ಒಣಗಿಸಿದ ನೇರಳೆ ಬೀಜವನ್ನು ರುಬ್ಬಿ ಪುಡಿ ಮಾಡಿಕೊಂಡು ಹಸುವಿನ ಹಾಲನ್ನು ಹಾಕಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಮೊಡವೆಗಳಿಗೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಹೀಗೆ ಪ್ರತಿದಿನ ಮಾಡಿದರೆ ಮೊಡವೆಗಳು ಮಾಯವಾಗುತ್ತದೆ.


* ತ್ವಚೆಯ ಹೊಳಪಿಗೆ ನೇರಳೆ ಹಣ್ಣಿನ ಬೀಜದ ಪುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ, ಎರಡು ಹನಿ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡು 15 ನಿಮಿಷಗಳ ನಂತರ ತೊಳೆಯಬೇಕು. ಈ ರೀತಿ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಮಾಡಿದರೆ ಒಳ್ಳೆಯ ಫಲಿತಾಂಶ ನಿಮ್ಮದಾಗುತ್ತದೆ.


*ಮುಖದ ಮೇಲೆ ಕಪ್ಪು ಕಲೆನಿವಾರಣೆಯಾಗಲು ನೇರಳೆ ಬೀಜದ ಪುಡಿಗೆ ಕಡಲೇ ಹಿಟ್ಟು, ಕೆಲ ಬಾದಾಮಿ ಎಣ್ಣೆಯ ಹನಿಗಳು ಮತ್ತು ರೋಸ್ ವಾಟರ್ ನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ಸಂಪೂರ್ಣ ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ತಿಂಗಳಿಗೆ ಒಮ್ಮೆ ಮಾಡಿದರೂ ನೀವು ಒಳ್ಳೆ ಫಲಿತಾಂಶ ಪಡೆಯುತ್ತೀರಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಗೆ ಮೊದಲು ಇವೆರಡು ವಿಚಾರಗಳನ್ನು ಮರೆಯಬೇಡಿ