Select Your Language

Notifications

webdunia
webdunia
webdunia
webdunia

ಒಂದೇ ದಿನ ಇಷ್ಟೊಂದು ದೂರ ನಡೆದರಂತೆ ರಾಹುಲ್ ಗಾಂಧಿ!

ಒಂದೇ ದಿನ ಇಷ್ಟೊಂದು ದೂರ ನಡೆದರಂತೆ ರಾಹುಲ್ ಗಾಂಧಿ!
ನವದೆಹಲಿ , ಶನಿವಾರ, 8 ಸೆಪ್ಟಂಬರ್ 2018 (09:21 IST)
ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ಒಂದೇ ದಿನ 34 ಕಿ.ಮೀ. ನಡೆದು 4500 ಕ್ಯಾಲೋರಿ ನಷ್ಟ ಮಾಡಿಕೊಂಡಿದ್ದಾರಂತೆ!

ಇದನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಜನರಿಗೆ ಈ ನಡಿಗೆಯ ಚಾಲೆಂಜ್ ಸ್ವೀಕರಿಸಲು ಆಹ್ವಾನ ನೀಡಿದೆ.  ರಾಹುಲ್ ಕೈಲಾಸ ಪರ್ವತದ ಹಿನ್ನಲೆಯಲ್ಲಿ ನಿಂತಿರುವ ಫೋಟೋ ಪ್ರಕಟಿಸಿರುವ ಕಾಂಗ್ರೆಸ್ ಅವರ ಯಾತ್ರೆಯ ವಿವರವನ್ನೂ ನೀಡಿದೆ.

ರಾಹುಲ್ ಗಾಂಧಿ ಯಾತ್ರೆ ಆರಂಭಿಸುವ ಮೊದಲೇ ಚಿಕನ್ ಸೂಪ್ ಸೇವಿಸಿದರು ಎಂಬ ಕಾರಣಕ್ಕೆ ವಿವಾದವಾಯ್ತು. ನಂತರ ಬಿಜೆಪಿ ರಾಹುಲ್ ನಿಜವಾಗಿಯೂ ಯಾತ್ರೆ ಕೈಗೊಂಡಿದ್ದಾರೆಯೇ ಇಲ್ಲವೇ ಎಂದು ಅನುಮಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಈ ಫೋಟೋ ಸಹಿತ ವಿವರಣೆ ಒದಗಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಮೈಸೂರು ಮಹಾರಾಜ ಯದುವೀರ್ ಈ ಪಕ್ಷದ ಲೋಕಸಭೆ ಅಭ್ಯರ್ಥಿ?!