Publish Date: Fri, 07 Sep 2018 (08:33 IST)
Updated Date: Fri, 07 Sep 2018 (08:35 IST)
ಬೆಳಗಾವಿ: ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಇಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಪ್ರತಿಷ್ಠೆಯ ಫೈಟ್ ನಡೆಯಲಿದೆ.
ಈ ಇಬ್ಬರು ಕಾಂಗ್ರೆಸ್ ನಾಯಕರ ಜಟಾಪಟಿ ಇದೀಗ ಸಮ್ಮಿಶ್ರ ಸರ್ಕಾರಕ್ಕೇ ಕಂಟಕವಾಗುವ ಲಕ್ಷಣ ತೋರುತ್ತಿದೆ. ಇಂದು ಮಧ್ಯಾಹ್ನ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯಾರ ಬಣಕ್ಕೆ ಗೆಲುವು ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
14 ಮಂದಿ ಬ್ಯಾಂಕ್ ನಿರ್ದೇಶಕರ ಪೈಕಿ 9 ಮಂದಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಸೇರಿದವರಾಗಿದ್ದು, ಉಳಿದವರು ಜಾರಕಿಹೊಳಿ ಸಹೋದರರ ಪರವಾಗಿದ್ದಾರೆ. ಎರಡೂ ಬಣದ ನಾಯಕರು ಚುನಾವಣೆಯನ್ನೇ ಪ್ರತಿಷ್ಠೆಯ ಕಣವಾಗಿಸಿದ್ದು, ರಾಜ್ಯ ನಾಯಕರೂ ಈ ಇಬ್ಬರೂ ನಾಯಕರನ್ನು ಸಮಾಧಾನಿಸಲು ಪ್ರಯತ್ನ ನಡೆಸಿದೆ. ಇವರಿಬ್ಬರ ಜಟಾಪಟಿ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ತಂದೊಡ್ಡುತ್ತಾ ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.