ರಾಹುಲ್ ಗಾಂಧಿಯನ್ನು ಜೋಕರ್ ಎಂದ ಕೆ ಚಂದ್ರಶೇಖರ್ ರಾವ್

ಶುಕ್ರವಾರ, 7 ಸೆಪ್ಟಂಬರ್ 2018 (07:04 IST)
ನವದೆಹಲಿ : ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ರಾಹುಲ್ ಗಾಂಧಿ ಅವರನ್ನು ಒಬ್ಬ ಜೋಕರ್ ಎಂದು ಕರೆದಿದ್ದಾರೆ.


ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾನಾಡಿದ ಅವರು,’ ಇಡೀ ದೇಶವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಜೋಕರ್ ಇದ್ದಂತೆ. ಪ್ರಧಾನಿ ಮೋದಿಯನ್ನು ರಾಹುಲ್ ಹೇಗೆ ತಬ್ಬಿಕೊಂಡ ಎಂಬುದು ಎಲ್ಲರಿಗೂ ಗೊತ್ತಿದೆ. ಜೋಕರ್ ಮಾದರಿಯಲ್ಲಿ ಅವರು ನಡೆದುಕೊಳ್ಳುತ್ತಾರೆ’ ಎಂದು ಆರೋಪಿಸಿದ್ದಾರೆ.


ಹಾಗೇ ‘ದಿಲ್ಲಿಯ ಸುಲ್ತಾನರ ಮಾದರಿಯಲ್ಲಿ ರಾಹುಲ್ ಆಡಳಿತ ನಡೆಸುತ್ತಾರೆ. ನಾವು ದಿಲ್ಲಿಯ ಅಥವಾ ಕಾಂಗ್ರೆಸ್ ಗುಲಾಮರಾಗಬೇಕಾಗಿಲ್ಲ’ ಎಂದಿದ್ದಾರೆ. ಅಲ್ಲದೇ ‘ಕಾಂಗ್ರೆಸ್ ಪಕ್ಷ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಕಾಂಗ್ರೆಸ್ ನಮಗೆ ಪ್ರಮುಖ ಪ್ರತಿಪಕ್ಷ’ ಎಂದು ರಾವ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಮುಕರಿಂದ ಮಹಿಳೆಯ ಮೇಲೆ ಗ್ಯಾಂಗ್ ರೇಪ್; ನಗ್ನಳಾಗಿಯೇ ತಪ್ಪಿಸಿಕೊಂಡ ಮಹಿಳೆ