Publish Date: Thu, 06 Sep 2018 (13:03 IST)
Updated Date: Thu, 06 Sep 2018 (13:05 IST)
ಬೆಂಗಳೂರು: ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದಕ್ಕೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಇದೀಗ ಚಿಕನ್ ಸೂಪ್ ತಿಂದು ಕೈಲಾಸ ಯಾತ್ರೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಅಧಿಕಾರ ಕಳೆದುಕೊಳ್ಳುತ್ತಾರೆ!
ಹೀಗಂತ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ. ಕೈಲಾಸ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ನೇಪಾಳದ ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ಸೂಪ್ ಸೇವಿಸಿದರು ಎಂಬುದು ಸುದ್ದಿಯಾಯಿತು. ಆದರೆ ನಂತರ ರಾಹುಲ್ ಕೇವಲ ಸಸ್ಯಾಹಾರ ಆಹಾರವನ್ನಷ್ಟೇ ಸೇವಿಸಿದರು ಎಂದು ಹೋಟೆಲ್ ಸ್ಪಷ್ಟನೆ ನೀಡಿತು.
ಹಾಗಿದ್ದರೂ ಬಿಜೆಪಿ ನಾಯಕರು ಮಾತ್ರ ಕಾಂಗ್ರೆಸ್ ಅಧ್ಯಕ್ಷರ ಕಾಲೆಳೆಯುವುದನ್ನು ಬಿಟ್ಟಿಲ್ಲ. ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಯತ್ನಾಳ್ ಮತ್ತೆ ಇಂತಹದ್ದೇ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.