Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ಕದಮ್ ನೀಡಿದ ಹೇಳಿಕೆಗೆ ಭಾರೀ ವಿರೋಧ!

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ಕದಮ್ ನೀಡಿದ ಹೇಳಿಕೆಗೆ ಭಾರೀ ವಿರೋಧ!
ಮಹಾರಾಷ್ಟ್ರ , ಬುಧವಾರ, 5 ಸೆಪ್ಟಂಬರ್ 2018 (15:22 IST)
ಮಹಾರಾಷ್ಟ್ರ : ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ಕದಮ್ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ.


ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ಕದಮ್ ಕಾರ್ಯಕ್ರಮವೊಂದರಲ್ಲಿ  ಯುವಜನರನ್ನು ಉದ್ದೇಶಿಸಿ ಮಾತನಾಡುವಾಗ ''ಯುವಜನರಿಗೆ ಏನು ಬೇಕಾದರೂ ಮಾಡಲು ನಾನು ಸಿದ್ಧ. ಏನು ಕೆಲಸ ಆಗಬೇಕಿದ್ದರೂ ನನಗೆ ಹೇಳಿ ಮಾಡಿಕೊಡುತ್ತೇನೆ. ಹುಡುಗಿಯರು ನಿಮ್ಮ ಪ್ರೇಮನಿವೇದನೆ ತಿರಸ್ಕರಿಸಿದರೆ ಎದೆಗುಂದಬೇಡಿ, ನಾನಿದ್ದೇನೆ. ಆ ಹುಡುಗಿಯನ್ನು ಅಪಹರಣ ಮಾಡಿಯಾದರೂ ನಿಮಗೆ ತಂದೊಪ್ಪಿಸುತ್ತೇನೆ'' ಎಂದು ಹೇಳಿದ್ದಲ್ಲದೇ ತನ್ನ ಮೊಬೈಲ್ ನಂಬರನ್ನೂ ಶಾಸಕರು ಸಭೆಯಲ್ಲಿದ್ದವರಿಗೆ ನೀಡಿದ್ದಾರೆ.


ಈ ವಿಡಿಯೋ ಇದೀಗ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದ್ದು ಶಾಸಕರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿ ಶಾಸಕ ರಾಮ್‌ಕದಮ್ ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಬಗ್ಗೆ ಕಟುವಾಗಿ ಟೀಕಿಸಿದ ಬಿಜೆಪಿಯ ಮಿತ್ರಪಕ್ಷ ಶಿವಸೇನೆಯ ಆದಿತ್ಯ ಠಾಕ್ರೆ, ಕದಂರಂತಹ ವ್ಯಕ್ತಿಗಳು ವಿಧಾನಸಭೆಯಲ್ಲಿ ಕುಳಿತುಕೊಳ್ಳುವುದು ನಾಚಿಕೆಗೇಡಿನ ವಿಷಯವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯಕ್ಕಾಗಿ ಪ್ರತಿದಿನ ಬಾಯ್ ಫ್ರೆಂಡ್ ನ ವೀರ್ಯ ಕುಡಿದ ಮಹಿಳೆ