Select Your Language

Notifications

webdunia
webdunia
webdunia
webdunia

ಧರ್ಮಗ್ರಂಥಗಳಿಗೂ ನೀಡಬೇಕು ಜಿ.ಎಸ್.ಟಿ; ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಆದೇಶ

ಧರ್ಮಗ್ರಂಥಗಳಿಗೂ ನೀಡಬೇಕು ಜಿ.ಎಸ್.ಟಿ; ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಆದೇಶ
ಮಹಾರಾಷ್ಟ್ರ , ಬುಧವಾರ, 5 ಸೆಪ್ಟಂಬರ್ 2018 (14:48 IST)
ಮಹಾರಾಷ್ಟ್ರ : ಧರ್ಮಗ್ರಂಥ, ಧಾರ್ಮಿಕ ಪತ್ರಿಕೆ, ನಿಯತಕಾಲಿಕೆ, ಡಿವಿಡಿ ಮಾರಾಟ ಒಂದು ವ್ಯಾಪಾರವಾಗಿದ್ದು, ಇವುಗಳು ಜಿ.ಎಸ್.ಟಿ. ಅಡಿಯಲ್ಲಿ ಬರಬೇಕೆಂದು ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಮಹತ್ವದ ಆದೇಶ ನೀಡಿದೆ.


ಈ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಮದ್ ರಾಮಚಂದ್ರ ಆಧ್ಯಾತ್ಮಿಕ ಸತ್ಸಂಗ ಸಾಧನಾ ಕೇಂದ್ರವು ಮಹಾರಾಷ್ಟ್ರ ಕೋರ್ಟ್ ನಲ್ಲಿ  ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವುದು ನಮ್ಮ ಕೆಲಸ. ಹಾಗಾಗಿ ಸಂಸ್ಥೆಯನ್ನು ವ್ಯಾಪಾರದ ಅಡಿ ಸೇರಿಸಬಾರದೆಂದು ಅರ್ಜಿ ಸಲ್ಲಿಸುವುದರ ಮೂಲಕ ಮನವಿ ಮಾಡಿದೆ.


ಆದರೆ ಜಿ.ಎಸ್.ಟಿ. ಆಯಕ್ಟ್ 2(17)ರ ಪ್ರಕಾರ, ಸೇವೆ ಅಥವಾ ಶಿಕ್ಷಣ ನೀಡಲು ಹಣ ಪಡೆಯುವ ಯಾವುದೇ ಧಾರ್ಮಿಕ ಟ್ರಸ್ಟ್ ಜಿ.ಎಸ್.ಟಿ. ಅಡಿ ಬರಲಿದೆ. ಅಂಥ ಸಂಸ್ಥೆಗಳು ಶೇಕಡಾ 18ರಷ್ಟು ಜಿ.ಎಸ್.ಟಿ. ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಂಸ್ಥೆಯನ್ನು ಜಿ.ಎಸ್.ಟಿ.ಯಿಂದ ಹೊರಗಿಡಲು ಸಾಧ್ಯವಿಲ್ಲ. ಯಾವುದೇ ಧಾರ್ಮಿಕ ಸಂಸ್ಥೆಗಳು ಧರ್ಮಗ್ರಂಥ ಅಥವಾ ಪುಸ್ತಕಗಳ ಮಾರಾಟಕ್ಕೆ ಜಿ.ಎಸ್.ಟಿ. ಕಟ್ಟಬೇಕು. ಸಾರ್ವಜನಿಕ ಗ್ರಂಥಾಲಯದಂತೆ ಭಕ್ತರಿಗೆ ಉಚಿತವಾಗಿ ಓದಲು ಅವಕಾಶ ನೀಡಿದ್ರೆ ಜಿ.ಎಸ್.ಟಿ. ಕಟ್ಟಬೇಕಾಗಿಲ್ಲ ಎಂದು ಕೋರ್ಟ್ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪದ ಬೆಂಕಿಗೆ ಶೆಡ್ ಆಹುತಿ