Publish Date: Wed, 05 Sep 2018 (14:29 IST)
Updated Date: Wed, 05 Sep 2018 (14:32 IST)
ಅವರು ಆ ಶೆಡ್ ನಲ್ಲಿ ಎಂದಿನಂತೆ ದೀಪ ಹಚ್ಚಿ ಇಟ್ಟಿದ್ದರು. ಆದರೆ ಅದೇನಾಯಿತೋ ಏನೋ? ಶೆಡ್ ಗೆ ಬೆಂಕಿ ತಗುಲಿ ಅಪಾರ ನಷ್ಟಕ್ಕೆ ಕಾರಣವಾಯಿತು.
ಶೆಡ್ಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೌಲ್ಯಗಳು ಹಾನಿಗೊಳಗಾದ ಘಟನೆ ನಡೆದಿದೆ. ಹಟ್ಟಿ ಚಿನ್ನದ ಗಣಿಯ ಹೀರೆನಗನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಶೆಡ್ಡಿನಲ್ಲಿ ಹಚ್ಚಿದ ದೀಪದಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.
ಮನೆ ಕಟ್ಟಿಸಲು ಬ್ಯಾಂಕಿನಿಂದ ತಂದಿದ್ದ 5 ಸಾವಿರ ಹಣ, 20 ಗ್ರಾಂ ಚಿನ್ನ, ಅಪಾರ ಪ್ರಮಾಣದ ಧಾನ್ಯಗಳು ಬೆಂಕಿಗಾಹುತಿ ಆಗಿದೆ.
ಮನೆ ಮಗಳು ರೂಪಾಳ ಎಸ್ ಎಸ್ ಎಲ್ ಸಿ, ಪಿಯುಸಿ ಅಂಕಪಟ್ಟಿ ಇತರೆ ದಾಖಲೆಗಳು ಸುಟ್ಟು ಭಸ್ಮವಾಗಿವೆ. ರಾಯಪ್ಪ ಕಡೆಮನಿ ಎಂಬುವರಿಗೆ ಸೇರಿದ ಶೆಡ್ ಇದಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.