Publish Date: Sun, 02 Sep 2018 (11:03 IST)
Updated Date: Sun, 02 Sep 2018 (11:06 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 45 ನೇ ವಸಂತಕ್ಕೆ ಕಾಲಿಟ್ಟ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸುದೀಪ್ ಅವರ ಜೆ.ಪಿ. ನಗರ ನಿವಾಸದ ಮುಂದೆ ನೆರೆದಿದ್ದಾರೆ.
ಕಳೆದ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದ ಸುದೀಪ್ ಅವರು ಈ ವರ್ಷ ಯಾರೊಬ್ಬ ಅಭಿಮಾನಿಯೂ ಕೇಕ್, ಶಾಲು ಹೂಹಾರಗಳನ್ನು ತರಬಾರದು ಎಂಬ ಕಂಡಿಷನ್ ಗಳ ಮೇರೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಹಾಗೇ ಇಂದು ತಮಗಾಗಿ ಖರ್ಚು ಮಾಡುವ ಹಣವನ್ನು ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ಜನತೆಯ ನೆರವಿಗೆ ನೀಡುವಂತೆ ಮನವಿ ಮಾಡಿದ್ದರು.
ಅದರಂತೆ ಅಭಿಮಾನಿಗಳು ನಟನ ಮಾತಿಗೆ ಬೆಲೆಕೊಟ್ಟು ಯಾವುದೇ ಉಡುಗೊರೆಯನ್ನು ತರದೆ ತುಂಬಾ ಶಿಸ್ತಿನಿಂದಲ್ಲೇ ಬಂದು ನಟನಿಗೆ ಶುಭಕೋರಿದ್ದಾರೆ. ಇಂದು ಇಡೀ ದಿನ ಅಭಿಮಾನಿಗಳ ಜೊತೆ ಕಳೆಯಲು ನಟ ಸುದೀಪ್ ನಿರ್ಧಾರ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ