Publish Date: Sun, 02 Sep 2018 (06:56 IST)
Updated Date: Sun, 02 Sep 2018 (06:57 IST)
ಬೆಂಗಳೂರು : ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಆರಂಭಿಸಿದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್ (ಕೆಸಿಸಿ)ಗೆ ಸ್ಯಾಂಡಲ್ ವುಡ್ ನ ಎಲ್ಲಾ ನಟರು ಭಾಗಹಿಸಿದ್ದಾರೆ. ಆದರೆ ನಟ ದರ್ಶನ್ ಅವರು ಮಾತ್ರ ಇದರಿಂದ ದೂರವೇ ಉಳಿದಿದ್ದಾರೆ.
ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ನಡುವೆ ಮನಸ್ತಾಪ ಇರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೂ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆದ ಕೆಸಿಸಿ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸದೆ ಇರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ನಟ ಸುದೀಪ್, ‘ಅವರು ಬರಬಾರದು ಅಂತ ಯಾರು ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗಬೇಕು. ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ. ಇದು ಒಳ್ಳೆ ವಿಚಾರಕ್ಕಾಗಿ ಆಡುತ್ತಿರುವ ಪಂದ್ಯಾವಳಿ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ