Publish Date: Sun, 02 Sep 2018 (08:35 IST)
Updated Date: Sun, 02 Sep 2018 (08:37 IST)
ಬೆಂಗಳೂರು: ಏನೋ ಕಾರಣಕ್ಕೆ ಲವರ್ ಗೆ ಕೈ ಕೊಟ್ಟು ಮನೆಯವರು ತೋರಿಸಿದ ಹುಡುಗನನ್ನೇ ಮದುವೆಯಾಗಬೇಕೆಂದಾಗ ಹಲವು ಸಮಸ್ಯೆಗಳು ಬರುತ್ತವೆ.
ಹಳೆಯ ಹುಡುಗ ಮದುವೆಗೆ ಅಡ್ಡಿಪಡಿಸುವುದು, ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕುವುದು ಇತ್ಯಾದಿ ಸಮಸ್ಯೆಗಳು. ಹಾಗಿದ್ದರೆ ಇವುಗಳಿಂದ ಹೊರಬರುವುದು ಹೇಗೆ?
ಮೊದಲನೆಯದಾಗಿ ನಿಮ್ಮ ಮೊದಲ ಹುಡುಗ ಒಳ್ಳೆಯವನಾ ಕೆಟ್ಟವನಾ ಎಂದು ಪರಾಮರ್ಶಿಸಿ. ಆತನ ಗುಣ ಒಳ್ಳೆಯದಾಗಿದ್ದು, ನಿಮ್ಮಿಂದ ದೂರವಾಗುವ ನೋವಿಗೆ ಈ ರೀತಿ ಮಾಡುತ್ತಿದ್ದಾನೆಂದರೆ ಆತನೊಂದಿಗೆ ಕೂತು ಚರ್ಚಿಸುವುದು ಒಳ್ಳೆಯದು. ಸಾಧ್ಯವಾದರೆ ಮನೆಯವರನ್ನು ಒಪ್ಪಿಸಿ ಆತನನ್ನೇ ಮದುವೆಯಾಗಿ.
ಇಲ್ಲವಾದರೆ ಆತನ ನಡತೆ ಸರಿ ಇಲ್ಲವೆಂದರೆ ಮನೆಯವರು ತೋರಿಸಿದ ಹುಡುಗನನ್ನೇ ಮದುವೆಯಾಗುವುದು ಒಳಿತು. ನಿಮಗೆ ಮನೆಯವರು ನಿಶ್ಚಯ ಮಾಡಿದ ಹುಡುಗನ ಜತೆಗೆ ಈ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯವಿದ್ದರೆ ಅದನ್ನೇ ಮಾಡಿ. ಇಲ್ಲವಾದರೆ ಪೋಷಕರ ಸಹಾಯ ಪಡೆಯಿರಿ. ಯಾವುದೇ ಕಾರಣಕ್ಕೂ ಇಂತಹ ಸಮಸ್ಯೆಗಳನ್ನು ನಿಮ್ಮೊಳಗೇ ಮುಚ್ಚಿಟ್ಟುಕೊಂಡು ಕೊರಗದಿರಿ. ಇದರಿಂದ ನಿಮ್ಮ ಮುಂದಿನ ವೈವಾಹಿಕ ಬದುಕಿಗೆ ತೊಂದರೆಯೇ ಹೆಚ್ಚು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.