Publish Date: Wed, 29 Aug 2018 (18:01 IST)
Updated Date: Wed, 29 Aug 2018 (18:08 IST)
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಹಿರಿಯರು ಹೇಳ್ತಿದ್ದರು. ಆದರೆ ಈಗ ಮದುವೆ ಮನೆಯಲ್ಲಿ ಸೀರೆ ಕೇಳಿದ್ದಕ್ಕೆ ಮದುವೆ ಮುರಿದಿರುವ ಘಟನೆ ನಡೆದಿದೆ.
ಮಧುಮಗಳು 2 ಸೀರೆ ಹೆಚ್ಚಾಗಿ ಕೇಳಿದಳೆಂಬ ಕಾರಣಕ್ಕೆ ಮದುವೆಯೇ ನಿಂತು ಹೋಗಿದೆ. ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು. ತುರುವೇಕೆರೆಯ ಸುಮಿತ್ ಮತ್ತು ತುಮಕೂರಿನ ಚಂದ್ರಕಲಾಗೆ ಮದುವೆ ನಿಶ್ಚಯವಾಗಿತ್ತು.
ಯುವತಿ ಯುವಕನಿಗೆ ಪೋನ್ ಮಾಡಿ 2 ಸೀರೆ ಹೆಚ್ಚಾಗಿ ಕೊಡುವಂತೆ ಕೇಳಿದ್ದಾಳೆ ಅಷ್ಟೇ. ಸೀರೆ ಕೇಳಿದ್ದಕ್ಕೆ ಮದುವೆಯೇ ಬೇಡ ಎಂದು ಯುವಕನ ಕುಟುಂಬದವರು ಕ್ಯಾತೆ ತೆಗೆದು ಮದುವೆ ನಿಲ್ಲಿಸಿದ್ದಾರೆ. ಜೊತೆಗೆ ಘಟನೆ ಮಾಹಿತಿ ಪಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೂ ಮುಂದಾಗಿದ್ದಾರೆ. ನೊಂದ ಯುವತಿ ಚಂದ್ರಕಲಾ ಕುಟುಂಬದವರು, ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.