Publish Date: Wed, 22 Aug 2018 (20:37 IST)
Updated Date: Wed, 22 Aug 2018 (20:40 IST)
ಅವರ ಮದುವೆ ಆಮಂತ್ರಣ ಕೂಡ ಸಿದ್ಧಗೊಂಡಿದ್ದವು. ಆದರೆ ವರುಣದೇವ ತೋರಿದ ಮುನಿಸಿಗೆ ಮದುವೆ ಆಗಬೇಕಿದ್ದ ಯುವತಿಯರ ಮನೆಗಳೇ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಕೊಡಗು ಜಿಲ್ಲೆಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. ಆ. 26ರಂದು ಇಬ್ಬರು ಯುವತಿಯರ ಮದುವೆ ನಿಶ್ಚಯವಾಗಿತ್ತು. ಆದರೆ ಅವರ ಮನೆಗಳೇ ಸುರಿದ ಧಾರಾಕಾರ ಮಳೆಯ ಪರಿಣಾಮ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಸದ್ಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಆ ಯುವತಿಯರ ಪಾಲಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಈ ಯುವತಿಯರ ಮನೆ ಕೊಚ್ಚಿ ಹೋಗಿದ್ದರೆ ಅತ್ತ ಇವರ ಜತೆ ನಿಶ್ಚಿತಾರ್ಥ ಮಾಡಿಕೊಂಡು ಹಸೆ ಮಣೆ ಏರಬೇಕಿದ್ದ ಯುವಕ ಕೇರಳದವರು. ಅವರ ಮನೆಗಳೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ. ಮದುವೆಗೆ ಬೇಕು ಅಂತ ಸಂಗ್ರಹಿಸಿ ಇಟ್ಟಿದ್ದ ವಸ್ತುಗಳೆಲ್ಲವೂ ಮಳೆ ನೀರಿನ ಪಾಲಾಗಿದೆ. ಹೀಗಾಗಿ ಇವರ ಮದುವೆ ಮಾಡುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಅವರ ಪಾಲಕರನ್ನು ಕಾಡುತ್ತಿದೆ.