Select Your Language

Notifications

webdunia
webdunia
webdunia
webdunia

ಸುಂದರ ಮುಖಕ್ಕಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ಆಲೋವೆರಾ ಜೆಲ್!!

ಸುಂದರ ಮುಖಕ್ಕಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ಆಲೋವೆರಾ ಜೆಲ್!!
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (18:02 IST)
ಆಲೋವೆರಾವನ್ನು ಅದ್ಭುತ ಸಸ್ಯವೆಂದು ಕರೆಯಲಾಗುತ್ತದೆ ಮತ್ತು ಇದನ್ನು ಅನೇಕ ಆರೋಗ್ಯ ಮತ್ತು ಔಷಧೀಯ ಉಪಯೋಗಗಳಿಗೆ ಬಳಸಲಾಗುತ್ತದೆ. ಅಷ್ಟೆ ಅಲ್ಲದೇ ನಮ್ಮ ಸೌಂದರ್ಯವನ್ನು ಕಾಪಾಡುವಲ್ಲಿಯೂ ಪ್ರಮಖ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಪೋಷಕಾಂಶ, ಖನಿಜಾಂಶ, ಅಮಿನೊ ಆಸಿಡ್, ವಿಟಮಿನ್‍ಗಳಾದ ಎ, ಎಫ್, ಸಿ ಮತ್ತು ಬಿ ಹೇರಳವಾಗಿರುತ್ತದೆ.
ಈ ರೀತಿಯ ಜೆಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ, ಆದರೆ ಅವುಗಳಲ್ಲಿ ಕೆಮಿಕಲ್ ಮತ್ತು ಕೃತಕ ಬಣ್ಣ ಹಾಗು ಪರಿಮಳ ದ್ರವವನ್ನು ಬಳಸಲಾಗಿರುತ್ತದೆ. ಇದು ನಮ್ಮ ಸೂಕ್ಷ್ಮ ಚರ್ಮದ ಮೇಲೆ ಕ್ರಮೇಣ ಕೆಟ್ಟ ಪರಿಣಾಮವನ್ನು ಬೇರುತ್ತದೆ.
 
ಬನ್ನಿ ಇಂತಹ ಅದ್ಭುತ ಲಾಭಗಳನ್ನು ಹೊಂದಿರುವ ರೋಸ್ ಆಲೋವೆರಾ ಜೆಲ್ ಅನ್ನು ತಯಾರಿಸುವುದು ಹೇಗೆ ಎಂದು ನೋಡೋಣ :-
 
ಬೇಕಾಗುವ ಸಾಮಗ್ರಿಗಳು
1/2 ಆಲೋವೆರಾದ ಎಲೆಯ ಜೆಲ್ (ಸ್ವಚ್ಛಗೊಳಿಸಿ ಅದರ ಒಳಗಿರುವ ತಿರುಳನ್ನು ಬಳಸಬೇಕು)
2 ವಿಟಾಮಿನ್ ಇ ಕ್ಯಾಪ್ಸುಲ್
1 ಪುಡಿಮಾಡಿದ ವಿಟಾಮಿನ್ ಸಿ ಮಾತ್ರೆ
1 ಚಮಚ ರೋಸ್ ವಾಟರ್
 
ಮಾಡುವ ವಿಧಾನ
* ಒಂದು ಮಿಕ್ಸಿ ಜಾರ್‌ನಲ್ಲಿ ಆಲೋವೆರಾ ಜೆಲ್, ವಿಟಾಮಿನ್ ಇ ಕ್ಯಾಪ್ಸುಲ್ ಒಳಗಿರುವ ಎಣ್ಣೆ, ಪುಡಿಮಾಡಿದ ವಿಟಾಮಿನ್ ಸಿ ಮಾತ್ರೆ, ರೋಸ್ ವಾಟರ್ ಅನ್ನು ಸೇರಿಸಿ, ರುಬ್ಬಿ.
 
* ರುಬ್ಬಿದ ಮಿಶ್ರಣವನ್ನು ಸ್ವಚ್ಛಗೊಳಿಸಿದ ಡಬ್ಬದಲ್ಲಿ ಶೇಖರಿಸಿಡಬಹುದು.
 
* ಇದನ್ನು ಪ್ರತಿದಿನ ಸ್ನಾನದ ನಂತರ ಮತ್ತು ಮಲಗುವ ಮೊದಲು ಮುಖಕ್ಕೆ ಹಚ್ಚಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಂಜಿವೀನಿ ಅಮೃತಬಳ್ಳಿಯ ಉಪಯೋಗ ನಿಮಗೆ ಗೊತ್ತೇ?