Publish Date: Sat, 01 Sep 2018 (08:48 IST)
Updated Date: Sat, 01 Sep 2018 (08:49 IST)
ಬೆಂಗಳೂರು: ಸಿಎಂ ಕುಮಾರಸ್ವಾಮಿ ಪುತ್ರ, ನಟ, ನಿಖಿಲ್ ಕುಮಾರಸ್ವಾಮಿ ಮದುವೆಯಾಗುತ್ತಿದ್ದಾರಂತೆ! ಅವರಿಗೆ ಹುಡುಗಿ ಹುಡುಕುವ ಕೆಲಸದಲ್ಲಿ ಸಿಎಂ ಎಚ್ ಡಿಕೆ ಬ್ಯುಸಿಯಾಗಿದ್ದಾರಂತೆ.
ಹಾಗಂತ ಸುದ್ದಿಯೊಂದು ಓಡಾಡುತ್ತಿದೆ. ಆಂಧ್ರಪ್ರದೇಶದ ಉದ್ಯಮಿ ಕೋಟೇಶ್ವರ ರಾ ವ್ ಪುತ್ರಿ ಜತೆ ನಿಖಿಲ್ ಮದುವೆ ಮಾತುಕತೆ ನಡೆದಿದೆ. ಇದಕ್ಕಾಗಿ ಈಗಾಗಲೇ ಸಿಎಂ ಕುಮಾರಸ್ವಾಮಿ ಕೋಟೇಶ್ವರ ರಾವ್ ಮನೆಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ನಾವಿಬ್ಬರು ಸ್ನೇಹಿತರು. ಹಾಗಾಗಿ ಅವರ ಮನೆಗೆ ಹೋಗಿದ್ದೆ. ಆದರೆ ಮದುವೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಆದರೆ ನಿಖಿಲ್ ಮದುವೆಗೆ ಹುಡುಗಿ ಹುಡುಕುತ್ತಿರುವುದು ನಿಜ ಎಂದು ಅವರ ಆಪ್ತ ವಲಯದಿಂದ ಗುಸು ಗುಸು ಕೇಳಿ ಬರುತ್ತಿದೆ. ಎಲ್ಲಾ ಸರಿ ಹೋದರೆ ಸದ್ಯದಲ್ಲೇ ನಿಖಿಲ್ ಮದುವೆ ಸೆಟ್ಟೇರುವುದು ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.