Publish Date: Sun, 02 Sep 2018 (08:41 IST)
Updated Date: Sun, 02 Sep 2018 (08:44 IST)
ವಾರಣಾಸಿ: ಬದುಕಿದ್ದಾಗಲೇ ಯಾರಿಗೂ ಶ್ರಾದ್ಧ ಕಾರ್ಯ ಮಾಡುವುದಿಲ್ಲ. ಆದರೆ ಇಲ್ಲೊಂದು ಶೋಷಿತ ಗಂಡಂದಿರ ಸಂಘದ ಸದಸ್ಯರು ತಮ್ಮ ಬದುಕಿರುವ ಮಾಜಿ ಪತ್ನಿಯರಿಗೇ ಶ್ರಾದ್ಧ ಮಾಡಿದ್ದಾರೆ!
ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಶನ್ (ಎಸ್ಐಎಫ್ಎಫ್) ಎಂಬ ಶೋಷಿತ ಗಂಡಂದಿರ ಸಂಘ ವಾರಣಾಶಿಯಲ್ಲಿ ತಮ್ಮ ಮಾಜಿ ಪತ್ನಿಯರಿಗೆ ಶ್ರಾದ್ಧ ಕಾರ್ಯ ನೆರವೇರಿಸಿ ಅವರ ನೆನಪುಗಳಿಂದಲೂ ಮುಕ್ತಿ ಪಡೆಯುವ ಪ್ರಯತ್ನ ಮಾಡಿದೆ!
ಸುಮಾರು 160 ಪುರುಷರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಪತ್ನಿಯರ ಬೇಡದ ನೆನಪುಗಳಿಂದ ಮುಕ್ತಿ ಪಡೆಯಲು ಈ ಕೆಲಸ ಮಾಡಿರುವುದಾಗಿ ಸಂಘಟನೆಯ ಮುಖ್ಯಸ್ಥರು ಹೇಳಿಕೊಂಡಿದ್ದಾರೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.