ಮಂಡ್ಯದಲ್ಲಿ ಮೈಸೂರು ಮಹಾರಾಜ ಯದುವೀರ್ ಈ ಪಕ್ಷದ ಲೋಕಸಭೆ ಅಭ್ಯರ್ಥಿ?!

ಶನಿವಾರ, 8 ಸೆಪ್ಟಂಬರ್ 2018 (09:17 IST)
ಮೈಸೂರು: ಮೈಸೂರು ಯುವರಾಜ ಯದುವೀರ್ ಒಡೆಯರ್ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಯೋಜನೆ ರೂಪಿಸಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿದ್ದು, ಮೈಸೂರು ಒಡೆಯರ್ ರನ್ನೇ ಕಣಕ್ಕಿಳಿಸಲು ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದಾಗ ಅರಮನೆಗೆ ಭೇಟಿ ನೀಡಿ ರಾಜಮನೆತನದವರನ್ನು ಭೇಟಿಯಾಗಿದ್ದರು. ಯದುವೀರ್ ಒಡೆಯರ್ ಕೂಡಾ ಹಿಂದೊಮ್ಮೆ ಮೋದಿಗೆ ಇನ್ನೊಂದು ಅವಕಾಶ ಸಿಗಬೇಕು ಎಂದಿದ್ದರು.

ಹೀಗಾಗಿ ಯದುವೀರ್ ರನ್ನು ಮಂಡ್ಯದಲ್ಲಿ ಕಣಕ್ಕಿಳಿಸಿ ಆ ಕ್ಷೇತ್ರವನ್ನು ತನ್ನದಾಗಿಸಲು ಬಿಜೆಪಿ ತೆರೆಮರೆಯ ಯತ್ನ ನಡೆಸಿದೆ ಎನ್ನಲಾಗಿದೆ. ಇದಕ್ಕೆ ರಾಷ್ಟ್ರ ನಾಯಕರ ಒಪ್ಪಿಗೆಯೂ ಇದೆ. ಆದರೆ ಯಾವುದಕ್ಕೂ ಯದುವೀರ್ ತೀರ್ಮಾನ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜಾರಕಿಹೊಳಿ ಸಹೋದರರಿಗೆ ಬಿಜೆಪಿ ದೊಡ್ಡ ಆಫರ್?!