ಬಿಎಸ್ ವೈಗೆ ಮಾನ ಇದ್ಯಾ? ಸಿಎಂ ಕುಮಾರಸ್ವಾಮಿ ಪ್ರಶ್ನೆ

ಶುಕ್ರವಾರ, 7 ಸೆಪ್ಟಂಬರ್ 2018 (08:44 IST)
ಬೆಂಗಳೂರು: ತಮ್ಮ ಪುತ್ರ ವಿಜಯೇಂದ್ರ ಐಟಿ ಅಧಿಕಾರಿಗಳನ್ನು ಭೇಟಿಯಾಗಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಮಾಡಿರುವುದಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವ ಬಿಎಸ್ ವೈಗೆ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

‘ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಏನು ನಷ್ಟವಾಗಿದೆಯೋ ಅದರ ಮೇಲೆ ಕೇಸು ಹಾಕಲಿ. ನನಗೇನೂ ಚಿಂತೆಯಿಲ್ಲ. ನೀವು ಹೇಳಿದ್ದೀರಲ್ಲಾ ಮಾನ ಎಂದು. ಅದು ಅವರಿಗೆ ಇದೆಯಾ?’ ಎಂದು ಸಿಎಂ ಎಚ್ ಡಿಕೆ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ  ಅವರು ಕೇಸು ಹಾಕುವುದಿದ್ದರೆ ಹಾಕಲಿ. ಅದನ್ನು ಎದುರಿಸುವ ಶಕ್ತಿ ನನಗಿದೆ. ನಾನು ದಾಖಲೆ ಇಲ್ಲದೆ ಮಾತನಾಡುವುದಿಲ್ಲ. ಪಲಾಯನವಾದ ಮಾಡುವುದಿಲ್ಲ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೆಳಗಾವಿ ಜಟಾಪಟಿ ಸಮ್ಮಿಶ್ರ ಸರ್ಕಾರಕ್ಕೇ ಕುತ್ತು?!