Select Your Language

Notifications

webdunia
webdunia
webdunia
webdunia

ಹಾವೇರಿಯಲ್ಲಿ ಅಚ್ಚರಿ ತಂದ ಫಲಿತಾಂಶ

ಹಾವೇರಿಯಲ್ಲಿ ಅಚ್ಚರಿ ತಂದ ಫಲಿತಾಂಶ
ಹಾವೇರಿ , ಸೋಮವಾರ, 3 ಸೆಪ್ಟಂಬರ್ 2018 (17:19 IST)
ಹಾವೇರಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಫಲಿತಾಂಶ ಮಾತ್ರ ಅಚ್ಚರಿ ಮೂಡಿಸಿದೆ.

ಹಾವೇರಿ ಜಿಲ್ಲೆಯ ಎರಡು ನಗರಸಭೆ, ಎರಡು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯತಿಗೆ ಚುನಾವಣೆ ನಡೆದಿತ್ತು. 480 ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದೆ. ಹಾವೇರಿ ನಗರಸಭೆ 31 ವಾರ್ಡ್ ಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 09 ಹಾಗೂ 07 ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಬಹುಮತಕ್ಕೆ 16 ಸ್ಥಾನಗಳು ಅವಶ್ಯಕತೆ ಇದ್ದು, ಹಾವೇರಿ ನಗರಸಭೆ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದು ಬಿಜೆಪಿ ಶಾಸಕ ನೆಹರು ಓಲೇಕಾರಗೆ ತೀವ್ರ ಮುಖ ಭಂಗವಾಗಿದೆ.

ಇನ್ನೂ ಅಪ್ಪ ಮಕ್ಕಳ ಹಿಡಿತದಲ್ಲಿದ್ದ ಹಾನಗಲ್ ಪುರಸಭೆ ಕೈ ಪಾಲಾಗಿದೆ. ಪುರಸಭೆಯ 23 ವಾರ್ಡ್​​ಗಳಲ್ಲಿ 19 ವಾರ್ಡ್​ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಉಳಿದಂತೆ ಬಿಜೆಪಿ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಮಾಜಿ ಸಚಿವ ಹಾಲಿ ಶಾಸಕ ಸಿ.ಎಂ.ಉದಾಸಿ ಹಾಗೂ ಸಂಸದ ಶಿವಕುಮಾರ್ ಉದಾಸಿಗೆ ಇಲ್ಲಿ ತೀವ್ರ ಮುಖಭಂಗವಾಗಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ, ಗುಲಾಲ್ ಎರಚಿ ಸಂಭ್ರಮಿಸಿದರು.

ಹಿರೇಕೆರೂರು ಪಟ್ಟಣ ಪಂಚಾಯತ್‌ಗೆ ಮತದಾರ ಅತಂತ್ರ ಫಲಿತಾಂಶ ನೀಡಿದ್ದಾನೆ. 20 ಸ್ಥಾನಗಳಲ್ಲಿ 8 ಸ್ಥಾನಗಳು ಕಾಂಗ್ರೆಸ್ ಪಾಲಾದರೆ 7 ಸ್ಥಾನಗಳು ಬಿಜೆಪಿ ಪಾಲಾಗಿವೆ. ಒಂದು ಸ್ಥಾನವನ್ನು ಜೆಡಿಎಸ್ ತನ್ನ ತಕ್ಕೆಗೆ ತೆಗೆದುಕೊಂಡರೇ ನಾಲ್ಕು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಗಳಿಸಿದ್ದಾರೆ. ಪರಿಣಾಮ ಯಾರಿಗೂ ಸಹ ಬಹುಮತ ನೀಡದ ಮತದಾರ ಪಟ್ಟಣ ಪಂಚಾಯ್ತಿಯಲ್ಲಿ ಅತಂತ್ರ ಫಲಿತಾಂಶ ನೀಡಿದ್ದು ಕಾಂಗ್ರೆಸ್ ಅಥವಾ ಬಿಜೆಪಿ ಅಧಿಕಾರ ಹಿಡಿಯಬೇಕಾದರೆ ಪಕ್ಷೇತರ ಅಭ್ಯರ್ಥಿಗಳ ಪಾತ್ರ ನಿರ್ಣಾಯಕವಾಗಲಿದೆ.

ರಾಣೇಬೆನ್ನೂರು ನಗರಸಭೆ ಚುನಾವಣೆಯಲ್ಲಿ 35 ಸ್ಥಾನಗಳ ಪೈಕಿ 15 ಬಿಜೆಪಿ 09, ಕಾಂಗ್ರೆಸ್, ಕೆಪಿಜೆಪಿ 10 ಹಾಗೂ ಪಕ್ಷೇತರರು 01 , ಸ್ಥಾನದಲ್ಲಿ ಗೆಲುವು ಸಾದಿಸಿದ್ದು ಸಚಿವ ಆರ್ ಶಂಕರ್ ಗೆ ಮುಖಭಂಗವಾಗಿದೆ. ಅಧಿಕಾರದ ಗದ್ದುಗೆ ಹಿಡಿಯಲು 18 ಸ್ಥಾನಗಳ ಅವಶ್ಯಕತೆ ಇದ್ದು ಫಲಿತಾಂಶ ಅತಂತ್ರವಾಗಿದೆ. ಇನ್ನೂ ಸವಣೂರು ಪುರಸಭೆಯ 27 ಸ್ಥಾನಗಳಲ್ಲಿ ಕಾಂಗ್ರೆಸ್ 15, ಬಿಜೆಪಿ 08, ಜೆಡಿಎಸ್ 02, ಹಾಗೂ ಇತರೆ ಇಬ್ಬರು ಗೆಲವು ಸಾಧಿಸಿದ್ದು ಸವಣೂರು ಪುರಸಭೆ ಕೈ ಪಾಲಾಗಿದೆ‌. ಒಟ್ಟಾರೆ ಕಾಂಗ್ರೆಸ್ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದು, ಬಿಜೆಪಿ ನೆಲಕಚ್ಚಿದೆ ಇನ್ನೂ ಇದೆ ಮೊದಲ ಬಾರಿಗೆ ಜೆಡಿಎಸ್ 3 ಸ್ಥಾನವನ್ನು ಗೆಲ್ಲುವ ಮೂಲಕ ಪಾದಾರ್ಪಣೆ ಮಾಡಿದೆ. ಇನ್ನೂ ಕಾಂಗ್ರೆಸ್ ಬಿಜೆಪಿ ನಡುವೆ ಜಿದ್ದಾ ಜಿದ್ದಿಯಾಗಿದ್ದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡುದ್ದು ಬಿಜೆಪಿಯ  ಒಳಜಗಳದಿಂದ ಹಿನ್ನಡೆ ಅನುಭವಿಸಿದೆ.




Share this Story:

Follow Webdunia kannada

ಮುಂದಿನ ಸುದ್ದಿ

9 ವರ್ಷಗಳ ಬಳಿಕ ಪತ್ತೆಯಾದ ಗೋಸ್ಟ್ ಶಿಪ್..!!