ಜಾರಕಿಹೊಳಿ ಸಹೋದರರಿಗೆ ಬಿಜೆಪಿ ದೊಡ್ಡ ಆಫರ್?!

ಶನಿವಾರ, 8 ಸೆಪ್ಟಂಬರ್ 2018 (08:45 IST)
ಬೆಂಗಳೂರು: ಬೆಳಗಾವಿ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ಲಾಭ ಪಡೆಯಲು ಬಿಜೆಪಿ ಯತ್ನ ನಡೆಸಿದ್ದು, ಜಾರಕಿಹೊಳಿ ಸಹೋದರರನ್ನು ಪಕ್ಷಕ್ಕೆ ಕರೆತರಲು ಯತ್ನ ನಡೆಸಿದೆ.

ಪಿಎಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ವಿರುದ್ಧ ಹಿನ್ನಡೆ ಅನುಭವಿಸಿದ್ದರಿಂದ ಜಾರಕಿಹೊಳಿ ಸಹೋದರರು ಈಗ ಅಸಮಾಧಾನ ಹೊಂದಿದ್ದಾರೆ. ಇದನ್ನೇ ಲಾಭವಾಗಿಸಲು ಬಿಜೆಪಿ ಯತ್ನ ನಡೆಸುತ್ತಿದೆ.

ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಇನ್ನು, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿಯನ್ನೂ ಬಿಜೆಪಿಗೆ ಕರೆತರಲು ರಾಜ್ಯ ನಾಯಕರು ಯತ್ನ ನಡೆಸಿದ್ದಾರೆ. ಬಿ ಶ್ರೀರಾಮುಲು ನೇತೃತ್ವದಲ್ಲಿ ಇಂತಹದ್ದೊಂದು ಪ್ರಯತ್ನ ತೆರೆಮರೆಯಲ್ಲೇ ನಡೆಯುತ್ತಿದೆ ಎನ್ನಲಾಗಿದೆ. ಒಂದು ವೇಳೆ ಈ ನಾಯಕರು ಬಿಜೆಪಿಗೆ ಬಂದರೆ ಸತೀಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆಯೂ ಆಫರ್ ನೀಡಲಾಗಿದೆ ಎನ್ನಲಾಗಿದೆ. ಇದೀಗ ರಾಜ್ಯ ಬಿಜೆಪಿ ನಾಯಕರು ಇದಕ್ಕಾಗಿ ರಾಷ್ಟ್ರ ನಾಯಕರ ಒಪ್ಪಿಗೆ ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಚಿತ ಡಾಟಾ ಬೇಕಾ...? ಹಾಗಾದ್ರೆ ಈ ಚಾಕೋಲೇಟ್ ಗಳನ್ನು ಖರೀದಿಸಿ