ನವದೆಹಲಿ: ರಾಹುಲ್ ಗಾಂಧಿ ಅನೇಕ ಬಾರಿ ಸಾರ್ವಜನಿಕವಾಗಿ ಮಾತನಾಡುವಾಗ ಸಾಕಷ್ಟು ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಅವರು ಟ್ರೋಲ್ ಗೊಳಗಾಗಿದ್ದು ಇದೆ. ಇದೀಗ ಪತ್ರಿಕಾಗೋಷ್ಠಿಯಲ್ಲೇ ದುರಾದೃಷ್ಟಕ್ಕೆ ನಾನು ಸಂಸದ ಎಂದು ಎಡವಟ್ಟು ಮಾಡಿದ್ದು ಇದನ್ನು ಪಕ್ಕದಲ್ಲೇ ಕೂತಿದ್ದ ಕಾಂಗ್ರೆಸ್ ವಕ್ತಾರ, ಹಿರಿಯ ನಾಯಕ ಜೈರಾಮ್ ರಮೇಶ್ ತಿದ್ದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲೋಕಸಭೆ ಕಲಾಪದ ಬಗ್ಗೆ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ದುರದೃಷ್ಟಕ್ಕೆ ನಾನು ಸಂಸದ. ನನಗೆ ಮಾತನಾಡಲು ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ ಎಂದರು. ಅವರ ಈ ಮಾತು ಅಪಾರ್ಥಕ್ಕೆಡೆ ಮಾಡಿಕೊಟ್ಟಿದೆ.
ತಕ್ಷಣವೇ ಪಕ್ಕದಲ್ಲಿದ್ದ ಜೈರಾಮ್ ರಮೇಶ್ ರಾಹುಲ್ ರನ್ನು ಕರೆದು ತಿದ್ದಿದ್ದಾರೆ. ದುರದೃಷ್ಟಕ್ಕೆ ಸಂಸದ ಎಂದರೆ ತಪ್ಪಾಗುತ್ತದೆ ಹಾಗಲ್ಲ, ಹೀಗೆ ಮಾತನಾಡಿ ಎಂದು ಜೈರಾಮ್ ರಮೇಶ್ ತಿದ್ದಿದ್ದಾರೆ. ಈ ವೇಳೆ ತಕ್ಷಣವೇ ಸಾವರಿಸಿಕೊಂಡ ರಾಹುಲ್ ಸರಿ ಹೇಳ್ತೀನಿ ಎಂದರು.
ಬಳಿಕ ನಿಮ್ಮ ದುರದೃಷ್ಟಕ್ಕೆ ಎಂದು ಕೇಂದ್ರವನ್ನು ಉದ್ದೇಶಿಸಿ ಶಬ್ಧ ಬದಲಾಯಿಸಿಕೊಂಡರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಗೊಳಗಾಗುತ್ತಿದೆ.