Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ

Gyanesh Kumar

Krishnaveni K

ನವದೆಹಲಿ , ಭಾನುವಾರ, 17 ಆಗಸ್ಟ್ 2025 (17:38 IST)
Photo Credit: X
ನವದೆಹಲಿ: ಮತಗಳ್ಳತನ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಈ ಮೂಲಕ ಸಂವಿಧಾನಕ್ಕೇ ಅವಮಾನ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ಪಿನ್ ಟು ಪಿನ್ ಪ್ರತ್ಯುತ್ತರ ನೀಡಿದೆ.

ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗ ರಾಹುಲ್ ಗಾಂಧಿ ಆರೋಪಗಳಿಗೆ ತಿರುಗೇಟು ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಶ್ ಕುಮಾರ್ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಚುನಾವಣಾ ಆಯೋಗದ ಮೇಲೆಯೇ ಆರೋಪ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನವಾಗಿದೆ ಎಂದಿದ್ದಾರೆ. ಆ ಮೂಲಕ ಸಂವಿಧಾನ ರಕ್ಷಣೆ ಎಂದು ಪದೇ ಪದೇ ಹೇಳುವ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.

ಮತಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಕೇಳಿದ್ದಕ್ಕೆ ಇದುವರೆಗೆ ಉತ್ತರ ನೀಡಿಲ್ಲ. ಇಂತಹ ಸುಳ್ಳು ಆರೋಪಗಳಿಗೆ ಆಯೋಗ ಅಥವಾ ಮತದಾರರು ಹೆದರುವುದಿಲ್ಲ. ಚುನಾವಣಾ ಆಯೋಗ ಯಾವತ್ತೂ ಬಡವರು, ಮಹಿಳೆಯರು, ಯುವಜನತೆ ಸೇರಿದಂತೆ ಎಲ್ಲಾ ಮತದಾರರ ಜೊತೆ ನಿಲ್ಲುತ್ತದೆ.

ಮತದಾರರ ಪಟ್ಟಿ ಸಿದ್ಧಪಡಿಸಲು ಒಂದು ಪ್ರಕ್ರಿಯೆಯಿದೆ. ಒಂದು  ವೇಳೆ ತಪ್ಪಾದರೆ ಅದನ್ನು ಸರಿಪಡಿಸಲು ಅವಕಾಶಗಳಿವೆ. ಇದರಲ್ಲಿ ಮತದಾರರು, ಬೂತ್ ಲೆವೆಲ್ ಆಫೀಸರ್, ರಾಜಕೀಯ ಪಕ್ಷಗಳ ಪಾಲ್ಗೊಳ್ಳುವಿಕೆಯೂ ಮುಖ್ಯ. ಇದರಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೂ ಇರುತ್ತಾರೆ. ಎಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ.

ಡ್ರಾಫ್ಟ್ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳೊಂದಿಗೂ ಹಂಚಿಕೊಳ್ಳಲಾಗುತ್ತದೆ. ಆಗ ಸಮಸ್ಯೆ ಕಂಡುಬಂದರೆ ಮನವಿ ಸಲ್ಲಿಸಬಹುದು. ಚುನಾವಣಾ ಅಭ್ಯರ್ಥಿಗಳ ಬಳಿ, ಬೂತ್ ಏಜೆಂಟ್ ಗಳ ಬಳಿಯೂ ಇದರ ಮಾಹಿತಿಯಿರುತ್ತದೆ. ಫಲಿತಾಂಶದ ಬಳಿಕವೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಫಲಿತಾಂಶ ಪ್ರಶ್ನಿಸಲು ಅವಕಾಶವಿದೆ. 45 ದಿನಗಳ ಬಳಿಕ ಯಾವುದೇ ದೂರು ದಾಖಲಿಸದೇ ಆರೋಪ ಮಾಡುವುದು ಕಾನೂನು ಬಾಹಿರ. 45 ದಿನಗಳಲ್ಲಿ ಬಾರದ ಅನುಮಾನ ಈಗ ಬಂದಿರುವುದು ಯಾಕೆ?

ಬಿಹಾರದಲ್ಲಿ ಕಳೆದ 20 ವರ್ಷಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಪರಿಷ್ಕರಣೆ ಮಾಡಲಾಗುತ್ತಿದೆ. ಮತದಾರರ ಪಟ್ಟಿ ಪರಿಶುದ್ಧವಾಗಲು ಪರಿಷ್ಕರಣೆ ಅಗತ್ಯ. ಆರೋಪ ಮಾಡುವ ವ್ಯಕ್ತಿ ಆ ಕ್ಷೇತ್ರದ ಮತದಾರ ಆಗಿರದಿದ್ದರೆ ಒಂದು ಪ್ರಮಾಣ ಪತ್ರ ಸಲ್ಲಿಸಬೇಕು. ಇದು ಬಹಳ ಹಳೆಯ ಕಾನೂನಾಗಿದೆ.

ಮಷಿನ್ ರೀಡೆಬಲ್ ಡಾಟಾ ನೀಡುವುದರಿಂದ ಮತದಾರರ ಗೌಪ್ಯತೆ ಬಹಿರಂಗವಾಗಬಹುದು. ಹೀಗಾಗಿ ನೀಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ ಅದನ್ನು ನಾವು ನೀಡಲು ಸಾಧ್ಯವಿಲ್ಲ. ಬಿಹಾರದಲ್ಲಿ ಇದೇ ಮೊದಲು ಮತಪರಿಷ್ಕರಣೆಯಾಗುತ್ತಿರುವುದಲ್ಲ. 2003 ರಲ್ಲೂ ಆಗಿತ್ತು. ಹೈಕೋರ್ಟ್ ನಲ್ಲಿ ದೂರು ದಾಖಲಿಸದೇ ಚುನಾವಣಾ ಆಯೋಗದ ವಿರುದ್ಧ ಭ್ರಮೆ ಹರಡುವ ಯತ್ನ ನಡೆಯುತ್ತಿದೆ.  ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್