Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿಯೇ ಪ್ರಧಾನಿ: ತೇಜಸ್ವಿ ಯಾದವ್ ವಿಶ್ವಾಸ

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್

Sampriya

ನಾವಡಾ , ಮಂಗಳವಾರ, 19 ಆಗಸ್ಟ್ 2025 (16:02 IST)
ನಾವಡಾ: ಎನ್‌ಡಿಎ ಸರ್ಕಾರವನ್ನು ತೊಡೆದು ಹಾಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲು ಯುವಕರು ಸಂಕಲ್ಪ ಮಾಡಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದರು.

ನಾವಡಾದಲ್ಲಿ ಕಾಂಗ್ರೆಸ್‌ನ 'ಮತದಾರ ಅಧಿಕಾರ ಯಾತ್ರೆ'ಯ ಮೂರನೇ ದಿನದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ಪೀಳಿಗೆಗೆ ರಾಜ್ಯವನ್ನು ನಡೆಸಲು ಅವಕಾಶ ಸಿಗುವ ಸಮಯ ಬಂದಿದೆ ಎಂದು ಹೇಳಿದರು.

"ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಕಿರಿಕಿರಿಯಾಗಿ ಮಾರ್ಪಟ್ಟಿದೆ ಮತ್ತು ಅದನ್ನು ತುರ್ತಾಗಿ ಬದಲಾಯಿಸಬೇಕಾಗಿದೆ. ಯುವಜನರಿಗೆ ಈಗ ಅವಕಾಶ ಸಿಗಬೇಕು. ನಮಗೆ ಬಿಹಾರದ ಬಗ್ಗೆ ದೂರದೃಷ್ಟಿ ಇದೆ. ಈ ಹಳೆಯ ಮತ್ತು ಅವ್ಯವಸ್ಥೆಯ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುತ್ತೇವೆ ಮತ್ತು ಮುಂದಿನ ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಬೇಕೆಂದು ಯುವಕರು ಸಂಕಲ್ಪ ಮಾಡಿದ್ದಾರೆ ಎಂದು ಅವರು ಹೇಳಿದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕಸರತ್ತು ಎಂದು ಯಾದವ್ ಪುನರುಚ್ಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ: ವರ್ಷದಲ್ಲಿ ಒಟ್ಟು 140 ಬಲಿ