Publish Date: Mon, 01 Jan 2024 (20:03 IST)
Updated Date: Mon, 01 Jan 2024 (21:09 IST)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ, 2023ರ ಕೊನೆಯ ದಿನದಂದು ಮನೆಯಲ್ಲಿಯೇ ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿ ವರ್ಷದ ಕೊನೆಯನ್ನು ವಿಶೇಷವಾಗಿಸಿದ್ದಾರೆ.. ಸ್ವತಃ ತಮ್ಮ ಕಿಚನ್ ಗಾರ್ಡನ್ನಿಂದ ತಾಜಾ ಹಣ್ಣುಗಳನ್ನು ಕಿತ್ತು ತಂದು ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿದ್ದಾರೆ.
ಇನ್ನು ಈ ರೆಸಿಪಿ ಹೇಗೆ ಮಾಡುವುದು ಎಂದು ಕೂಡ ವಿಡಿಯೋ ಮೂಲಕ ಹೇಳಿಕೊಟ್ಟಿದ್ದಾರೆ. ತಮ್ಮ ಕಿಚನ್ ಗಾರ್ಡನ್ನಿಂದ ತಾಯಿ ಹಾಗೂ ಮಗ ಕಿತ್ತಳೆಗಳನ್ನು ಕಿತ್ತು ತರುತ್ತಾರೆ.. ಬಳಿಕ ಅವುಗಳನ್ನು ಕತ್ತರಿಸುತ್ತಾರೆ.. ಬಳಿಕ ರಾಹುಲ್ ಗಾಂಧಿ ಜಾಮ್ ತಯಾರಿಸುತ್ತಾರೆ. ಈ ವಿಡಿಯೋವರನ್ನು ರಾಹುಲ್ ಗಾಂಧಿ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಶೇರ್ ಮಾಡಿದ್ದಾರೆ.. ಇದನ್ನು ನೀವು ಬ್ರೆಡ್, ಚಪಾತಿ, ರೊಟ್ಟಿ ಅಥವಾ ನಿಮಗಿಷ್ಟವಾದಂತಹ ಪದಾರ್ಥದೊಂದಿಗೆ ಬೆರೆಸಿ ಸೇವಿಸಬಹುದು.