Publish Date: Mon, 01 Jan 2024 (18:24 IST)
Updated Date: Mon, 01 Jan 2024 (18:38 IST)
ಹೈಕಮಾಂಡ್ ಬುಲಾವ್ ಹಿನ್ನೆಲೆ ಜನವರಿ 4ರಂದು ದೆಹಲಿಗೆ ಸಿಎಂ ಹಾಗೂ ಡಿಸಿಎಂ ಪ್ರಯಾಣ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ, ಬೆಂಗಳೂರಿನಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನ ಕರೆದಿದ್ದಾರೆ, ಅವರು ದೆಹಲಿಗೆ ಹೋಗ್ತಾ ಇದ್ದಾರೆ, ಲೋಕಸಭಾ ಚುನಾವಣೆ ಪ್ರಿಪರೇಷನ್ಗೆ ಹೋಗ್ತಿದ್ದಾರೆ, ನಾವು ನಮ್ಮ ಅಭಿಪ್ರಾಯ ಇವರಿಗೆ ಹೇಳಿದ್ದೇವೆ, ನಮಗೆ ಕರೆಯುವ ಅವಶ್ಯಕತೆ ಇಲ್ಲ ಎಂದರು.
ರಾಮಮಂದಿರ ಉದ್ಘಾಟನೆಗೆ ಅನ್ವಯ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಕೂಡ ಹಿಂದುಗಳೇ, ಬಿಜೆಪಿ ಅವರಷ್ಟೇ ಹಿಂದುಗಳಲ್ಲ, ರಾಮಮಂದಿರ ಉದ್ಘಾಟನೆಗೆ ಹೋಗಬೇಕೋ ಬೇಡವೋ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ. ರಾಮರಾಜ್ಯ ಅನ್ನೋದು ಎಲ್ಲರಿಗೂ ಇದೆ, ಬಿಜೆಪಿಗಷ್ಟೇ ಅಲ್ಲ. ಇಂಡಿಯಾ ಕೂಟ ರಾಮ ಮಂದಿರ ಉದ್ಘಾಟನೆಗೆ ಹೋಗಬಾರದು ಅನ್ನೋದರ ಬಗ್ಗೆ ದೆಹಲಿ ನಾಯಕರು ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ರು.