Publish Date: Mon, 01 Jan 2024 (16:01 IST)
Updated Date: Mon, 01 Jan 2024 (16:15 IST)
ಸಿಬಿಐ ನೋಟೀಸ್ ನೀಡಿರುವ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಯಾವ ಲೆಕ್ಕಾಚಾರ ನೋಟೀಸ್ ಕೊಡುತ್ತಿದ್ದಾರೋ ಗೊತ್ತಿಲ್ಲ.ಎಲ್ಲಾ ದಾಖಲೆಗಳು ಅವರ ಬಳಿಯಿವೆ.ಸರ್ಕಾರ ಈ ಕೇಸ್ ವಿತ್ ಡ್ರಾ ಮಾಡಿದೆ.ವಿತ್ ಡ್ರಾ ಮಾಡಿದ ಮೇಲೆ ಎಲ್ಲ ವಾಪಸ್ ಲೋಕಾಯುಕ್ತಕ್ಕೆ ಕೊಡಬೇಕು ಎಂಬುದು ನನಗಿರುವ ಜ್ಞಾನ.ನಾನು ವಕೀಲ ಅಲ್ಲ, ಆದರೂ ನನಗಿರುವ ಜ್ಞಾನ.ಕಿರುಕುಳ ಕೊಡಲು ಬಹಳ ದೊಡ್ಡ ದೊಡ್ಡ ಜನ ಇದ್ದಾರೆ.
ನನಗೆ ಎಲ್ಲವೂ ಗೊತ್ತಿದೆ, ಅವರು ಏನು ಬೇಕಾದರೂ ಮಾಡಲಿ.ನನ್ನ ರಾಜಕೀಯವಾಗಿ ಮುಗಿಸಬೇಕು, ತೊಂದರೆ ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ.ನನ್ನ ಜೈಲಿಗೆ ಕಳಿಸುತ್ತೇವೆ ಎಂದು ಕೆಲ ಬಿಜೆಪಿ ನಾಯಕರು ಭವಿಷ್ಯ ನುಡಿದ್ದರು.ಯಾರು ಮಾತಾಡಿದ್ರು ಅವರಿಗೆ ಬನ್ನಿ ಚರ್ಚೆ ಮಾಡೋಣ ಎಂದು ಕರೆದಿದ್ದೆ.ಬಹಳ ದೊಡ್ಡ ಪ್ಲಾಂಟೋ ನಡೆಯುತ್ತಿದೆ .ನಾನೇನು ತಪ್ಪು ಮಾಡಿಲ್ಲ ಅವರು ಏನು ಬೇಕಾದರೂ ಮಾಡಿಕೊಳ್ಳಲಿ.ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.