Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಧಾನಕ್ಕೆ ಫೈನಲ್‌ ಡೇಟ್‌ ಕೊಟ್ಟ ಸೋಮಣ್ಣ!

ಬಿಜೆಪಿ ಸಂಧಾನಕ್ಕೆ ಫೈನಲ್‌ ಡೇಟ್‌ ಕೊಟ್ಟ ಸೋಮಣ್ಣ!
bangalore , ಭಾನುವಾರ, 31 ಡಿಸೆಂಬರ್ 2023 (18:42 IST)
ವಿಧಾನ ಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬಿಟ್ಟು ಬೇರೆ ಎರಡು ಕಡೆ ಸ್ಪರ್ಧಿಸುವ ಮೂಲಕ ನಾನಾಗಿಯೇ ಹೋಗಿ ನಾಲ್ಕೂವರೆ ಅಡಿ ಹಳ್ಳಕ್ಕೆ ಬಿದ್ದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. 

ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿ. ಸೋಮಣ್ಣ ಜ . 9 ರಂದು ದೆಹಲಿಗೆ ಹೋಗುತ್ತಿದ್ದೇನೆ. ನನಗೆ ತೊಂದರೆ ನೀಡಿದವರನ್ನು ಎದುರಿಗೇ ಕರೆಸಿ ಸೂಚನೆ ಕೊಡಲು ಹೈಕಮ್ಯಾಂಡ್‌ ನಾಯಕರಿಗೆ ತಿಳಿಸಿದ್ದೇನೆ ಎಂದರು. 
 
ಅದ್ಯಾರು ಮಾಟಮಂತ್ರ ಮಾಡಿಸಿದರೋ ಗೊತ್ತಿಲ್ಲ. ಗೋವಿಂದರಾಜನಗರದಲ್ಲಿ ಸ್ಪರ್ಧಿಸದೇ ಹೋಗಿ ವರುಣಾದಲ್ಲಿ ಸ್ಪರ್ಧಿಸಿದೆ. ನಮ್ಮವರಿಂದಲೇ ನಾನು ಎರಡೂ ಕ್ಷೇತ್ರದಲ್ಲಿ ಸೋಲಬೇಕಾಯ್ತು ಎಂದು ಸೋಮಣ್ಣ ಸ್ವಪಕ್ಷೀಯರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. 
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಜ.1 0ರ ಬಳಿಕ ಎಲ್ಲವೂ ನಿರ್ಧಾರವಾಗುತ್ತದೆ ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ – ಕನ್ನಡ ಪುಸ್ತಕಗಳ ಮೇಲೆ ಶೇ 50 ರಷ್ಟು ರಿಯಾಯಿತಿ