Select Your Language

Notifications

webdunia
webdunia
webdunia
Monday, 7 April 2025
webdunia

ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ – ಕನ್ನಡ ಪುಸ್ತಕಗಳ ಮೇಲೆ ಶೇ 50 ರಷ್ಟು ರಿಯಾಯಿತಿ

r book lovers
bangalore , ಭಾನುವಾರ, 31 ಡಿಸೆಂಬರ್ 2023 (18:20 IST)
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ತನ್ನೆಲ್ಲಾ ಪ್ರಕಟಣೆಗಳ ಮೇಲೆ ಶೇ 50 ರಷ್ಟು ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿ ದರದ ಮಾರಾಟ ಜ.1 ರಿಂದ ಜ. 31 ರ ವರೆಗೆ ಇರಲಿದೆ. 
 
ಕನ್ನಡಿಗರಲ್ಲಿ ವಾಚನಾಭಿರುಚಿ ಬೆಳೆಸುವುದು ಹಾಗೂ ಕನ್ನಡ ಪುಸ್ತಕಗಳನ್ನು ಕೈಗೆಟುಕುವ ಬೆಲೆಯಲ್ಲಿ ತಲುಪಿಸುವುದು ತಮ್ಮ ಉದ್ದೇಶವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಹೇಳಿಕೊಂಡಿದೆ. ಇದುವರೆಗೂ ಕನ್ನಡ ಪುಸ್ತಕ ಪ್ರಾಧಿಕಾರ 740 ಪುಸ್ತಕಗಳನ್ನು ಹೊರತಂದಿದೆ. ಇವುಗಳ ಪೈಕಿ ಕೆಲವು ಮುದ್ರಣ ಮುಗಿದಿದ್ದು, ಮಿಕ್ಕೆಲ್ಲಾ ಪುಸ್ತಕಗಳೂ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.  
 ಪುಸ್ತಕ ಪ್ರಾಧಿಕಾರದ ಜಾಲತಾಣ www.kannadapustakapradhikara.com ಮೂಲಕವೂ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಬಂದೂಕು ಹಿಡಿದು ಹೆದ್ದಾರಿಯಲ್ಲಿ ಹುಚ್ಚಾಟ