Select Your Language

Notifications

webdunia
webdunia
webdunia
webdunia

ಡಿಕೆಶಿಗೆ ಮತ್ತೆ ಅಕ್ರಮ ಆಸ್ತಿ ಕಂಟಕ!

DK Shivakumar
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮತ್ತೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮತ್ತೊಮ್ಮೆ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. ಸಿಬಿಐ ಈ ಸಂಬಂಧ ತನಿಖೆಯನ್ನ ಮುಂದುವರೆಸಿದ್ದು, ಡಿಕೆಶಿ ಹೂಡಿಕೆ ಸಂಬಂಧ ಕೇರಳದ ಖಾಸಗಿ ಚಾನಲ್‌ಗೆ ನೋಟಿಸ್‌ ನೀಡಲಾಗಿದೆ.

ಡಿಕೆಶಿ ಜೈ ಹಿಂದ್‌ ಚಾನೆಲ್‌ನಲ್ಲಿ ಹೂಡಿಕೆ ಮಾಡಿರುವ ಮಾಹಿತಿ ಇದ್ದು, ಈ ಸಂಬಂಧ ನೋಟಿಸ್ ಕೊಟ್ಟು ಚಾನಲ್‌ ಎಂಡಿ ಬಿ.ಎಸ್.ಶಿಜುಗೆ ಸಿಬಿಐ ಬುಲಾವ್ ಕೊಟ್ಟಿದೆ. ಜನವರಿ 11ರಂದು ಎಲ್ಲಾ ದಾಖಲೆಗಳೊಂದಿಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಇದಿಷ್ಟೇ ಅಲ್ಲ, ಡಿ.ಕೆ.ಶಿವಕುಮಾರ್ ವಿರುದ್ಧ ಜಾರ್ಜ್‌ಶೀಟ್‌ ಸಲ್ಲಿಸಲು ಸಿಬಿಐ ಸಿದ್ಧತೆ ಮಾಡಿಕೊಂಡಿದೆ.

ಶೋಭಾ ಡೆವಲಪರ್ಸ್ ಲುಲು ಮಾಲ್‌, ಗ್ಲೋಬಲ್‌ ಮಾಲ್‌ ಹಾಗೂ ಟ್ರಾವೆಲ್ಸ್ ಕಂಪನಿಯ ಮಾಲೀಕರಿಗೂ ನೋಟಿಸ್ ನೀಡಿದ್ದು, ತನಿಖೆ ಬಳಿಕ ದೋಷಾರೋಪ ಪಟ್ಟಿ ಸಲ್ಲಿಸೋಕೆ ತಯಾರಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳ ಹೊಡೆದಾಟ