Publish Date: Mon, 01 Jan 2024 (16:26 IST)
Updated Date: Mon, 01 Jan 2024 (16:51 IST)
ಹಳೆ ವೈಷಮ್ಯದ ಹಿನ್ನೆಲೆ ಮಾರಾಕಾಸ್ತ್ರಗಳಿಂದ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ನಗರದ ಮದರ್ ಟ್ರಸ್ಟ್ ಶಾಲೆ ಮುಂಭಾಗದಲ್ಲಿ ನಡೆದಿದೆ. 7ನೇ ತರಗತಿ ಮತ್ತು 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಜಗಳವಾಗಿದ್ದು, ಇಬ್ಬರು ಬಾಲಕರು ಇನ್ನೂ ಮೂವರನ್ನ ಕರೆದುಕೊಂಡು ಬಂದು ಜಗಳಕ್ಕೆ ಇಳಿದಿದ್ದಾರೆ.
ಇನ್ನು ಗಲಾಟೆಯಲ್ಲಿ ವಿದ್ಯಾರ್ಥಿಗಳು ಎರಡು ಚಾಕು ಹಾಗೂ ಒಂದು ಏರ್ಗನ್ ಬಳಕೆ ಮಾಡಿದ್ದಾರೆ. ಸಾರ್ವಜನಿಕರು ವಿದ್ಯಾರ್ಥಿಗಳ ಗಲಾಟೆ ಆರಂಭವಾತ್ತಿದ್ದಂತೆ ಜಗಳ ಬಿಡಿಸಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಮಾರಕಾಸ್ತ್ರಗಳನ್ನು ಮತ್ತು ಇಬ್ಬರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ