Select Your Language

Notifications

webdunia
webdunia
webdunia
webdunia

ಹೊಸ ವರ್ಷದ ದಿನವೇ ಬೆಂಗಳೂರಿನಲ್ಲಿ ಯುವಕನ ಹತ್ಯೆ

ಹೊಸ ವರ್ಷದ ದಿನವೇ ಬೆಂಗಳೂರಿನಲ್ಲಿ ಯುವಕನ ಹತ್ಯೆ
bangalore , ಸೋಮವಾರ, 1 ಜನವರಿ 2024 (15:00 IST)
ಹೊಸ ವರ್ಷದ ದಿನವೇ ಬೆಂಗಳೂರಿನ ಹನುಮಂತ್ ನಗರದ 80 ಅಡಿ ರಸ್ತೆಯಲ್ಲಿ ಯುವಕನ ಕಗ್ಗೊಲೆ ನಡೆದಿದೆ.ಆಟೋದಲ್ಲಿ ಬಂದ ಹಂತಕರಿಂದ ಮಾರಕಾಸ್ತ್ರಗಳಿಂದ  ಕೊಚ್ಚಿ ಕೊಲೆ ಮಾಡಲಾಗಿದೆ.21 ವರ್ಷದ ವಿಜಯ್ ಕೊಲೆಯಾದ ಬನಶಂಕರಿ ನಿವಾಸಿಯಾಗಿದ್ದು,ವಿಜಯ್ ಕೊಲೆಗೈದು ರಸ್ತೆ ಬದಿಯಲ್ಲಿ ದುಷ್ಕರ್ಮಿಗಳು ಶವ ಎಸೆದು ಪರಾರಿಯಾಗಿದ್ದಾರೆ.
 
ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಕೊಲೆ ನಡೆದಿದೆ.ಸ್ನೇಹಿತರಿಂದಲೇ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ.ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.ನಿನ್ನೆ ತನ್ನ ಗೆಳೆಯರ ಜೊತೆ ವಿಜಯ್ ಸೆಲೆಬ್ರೇಷನ್ ಗೆ ಬಂದಿದ್ದ.ರಾತ್ರಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಕುಡಿದಿದ್ದಾರೆ.ಮನೆಗೆ ಹೋಗೋವಾಗ ವಿಜಯ್ ಹಾಗೂ ಗೆಳೆಯರ ಮಧ್ಯೆ ಜಗಳ ಶುರುವಾಗಿತ್ತು.ಆಟೋದಲ್ಲಿ ಹೋಗೋವಾಗ  ವಿಜಯ್ ಹಾಗೂ ಸ್ನೇಹಿತರು ಜಗಳ ಹೆಚ್ಚು ಮಾಡಿಕೊಂಡಿದ್ದರು.

ಜಗಳದ ವೇಳೆ ವಿಜಯ್ ಎದೆಗೆ ಓರ್ವ ಚಾಕು ಇರಿದಿದ್ದ.ಚಾಕು ಇರಿದು ಶ್ರೀನಿವಾಸ್ ನಗರ ಬಸ್ ನಿಲ್ದಾಣದ ಮುಂದೆ ಬಿಸಾಕಿ ಎಸ್ಕೇಪ್ ಹಾಕಿದ್ದಾರೆ.ಈ ವೇಳೆ ತೀವ್ರ ರಕ್ತಸ್ರಾವವಾಗಿ ವಿಜಯ್ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹನುಮಂತ ನಗರ ಪೊಲೀಸರಿಂದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಮೇಶ್ವರ್ ಸದಾನಂದ ಗೌಡ ಟಾಂಗ್