Publish Date: Mon, 01 Jan 2024 (10:00 IST)
Updated Date: Mon, 01 Jan 2024 (10:13 IST)
ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಜನರಿಗೆ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿವೆ. ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.
19 ಕೆ.ಜಿ.ಯ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು 4.50 ರೂ.ಗಳಷ್ಟು ಕಡಿತವಾಗಿದೆ. ಒಂದೊಂದು ನಗರದಲ್ಲಿ ವ್ಯತ್ಯಸ್ಥ ರೀತಿಯಲ್ಲಿ ಬೆಲೆ ಇಳಿಕೆಯಾಗಿದೆ.
ದೆಹಲಿಯಲ್ಲಿ ಒಂದೂವರೆ ರೂಪಾಯಿಷ್ಟು ಇಳಿಕೆಯಾಗಿದ್ದು ಈ ಮೊದಲು 1,757 ರೂ. ಇದ್ದ ಬೆಲೆ ಈಗ 1,755.50 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ಸುಮಾರು 4.50 ರೂ.ರಷ್ಟು ಇಳಿಕೆಯಾಗಿದೆ. ಮುಂಬೈನಲ್ಲಿ 1.50 ರೂ. ನಷ್ಟು ಇಳಿಕೆಯಾಗಿದೆ.
ಇದಕ್ಕೆ ಮೊದಲು ಡಿಸೆಂಬರ್ ಕೊನೆಯ ವಾರದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಕೊಂಚ ಇಳಿಕೆಯಾಗಿತ್ತು. ಈಗ ಇನ್ನಷ್ಟು ಇಳಿಕೆಯಾಗಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತದೆ.