Select Your Language

Notifications

webdunia
webdunia
webdunia
webdunia

ಸ್ತ್ರೀಯರು ಜೀನ್ಸ್ ತೊಡುವುದರಿಂದ ನಪುಂಸಕ ಮಕ್ಕಳು ಹುಟ್ಟುತ್ತಾರಂತೆ!

ಸ್ತ್ರೀಯರು ಜೀನ್ಸ್ ತೊಡುವುದರಿಂದ ನಪುಂಸಕ ಮಕ್ಕಳು ಹುಟ್ಟುತ್ತಾರಂತೆ!
ತಿರುವನಂತಪುರಂ , ಗುರುವಾರ, 5 ಏಪ್ರಿಲ್ 2018 (09:17 IST)
ತಿರುವನಂತಪುರಂ: ಸ್ತ್ರೀಯರು ಪುರುಷರಂತೆ ಜೀನ್ಸ್ ಪ್ಯಾಂಟ್ ಹಾಕಿಕೊಂಡು, ಅವರಂತೇ ವರ್ತಿಸಿದರೆ ಅವರಿಗೆ ಮುಂದೆ ಹುಟ್ಟುವ ಮಕ್ಕಳೂ ಅತ್ಲಾಗಿ, ಪುರುಷರೂ ಅಲ್ಲ, ಇತ್ಲಾಗಿ ಮಹಿಳೆಯರೂ ಅಲ್ಲದ ನಪುಂಸಕರಾಗುತ್ತಾರಂತೆ!

ಹೀಗೊಂದು ವಿವಾದಾತ್ಮಕ ಹೇಳಿಕೆಯನ್ನು ಕೇರಳದ ಪ್ರಾದ್ಯಾಪಕರೊಬ್ಬರು ತಮ್ಮ ವಿದ್ಯಾರ್ಥಿಗಳ ಮುಂದೆ ಹೇಳಿದ್ದಾರೆ. ಪ್ರಾದ್ಯಾಪಕ ಡಾ. ರಂಜಿತ್ ಕುಮಾರ್ ಈ ರೀತಿ ಹೇಳಿಕೆ ನೀಡಿದ ಭೂಪ! ಇದೀಗ ಪ್ರೊಫೆಸರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕೇರಳದ ಕಾಲಡಿಯಲ್ಲಿರುವ ಕಾಲೇಜೊಂದರಲ್ಲಿ ಪ್ರಾದ್ಯಾಪಕರಾಗಿರುವ ರಂಜಿತ್ ಕುಮಾರ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇಷ್ಟೆಲ್ಲಾ ರದ್ದಾಂತವಾದ ಬಳಿಕ ಕೇರಳದ ಆರೋಗ್ಯ ಸಚಿವೆ ಶೈಲಜಾ ಮಧ್ಯಪ್ರವೇಶಿಸಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬ ಸ್ಪರ್ಧಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಆಯೋಗದ ತಗಾದೆ