ವೆಲೆನ್ಸಿಯಾ : ಪೊಲೀಸ್ ಠಾಣೆಯಲ್ಲಿ ಬೆಂಕಿಯ ದುರಂತ ಸಂಭವಿಸಿದ್ದ ಕಾರಣ 68 ಮಂದಿ ಸಾವನಪ್ಪಿದ ಘಟನೆ ಕ್ಯಾರಬೊಬೊ ರಾಜ್ಯದ ವೆಲೆನ್ಸಿಯಾ ನಗರದಲ್ಲಿ ನಡೆದಿದೆ. 
									
			
			 
 			
 
 			
			                     
							
							
			        							
								
																	
ಜೈಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜೈಲಿನಲ್ಲಿದ್ದ ಖೈದಿಗಳು ಬೆಡ್ ಶೀಟ್ ಗಳಿಗೆ ಬೆಂಕಿ ಹಾಕಿದ್ದರಿಂದ ಈ ಬೆಂಕಿ ಜೈಲಿನ ತುಂಬಾ ಹರಡಿಕೊಂಡಿತ್ತು. ಈ ದುರಂತದಲ್ಲಿ ಓರ್ವ ಪೊಲೀಸ್  ಸೇರಿ ಜೈಲಿಗೆ ಭೇಟಿಗೆ ಬಂದ ಇಬ್ಬರು ಮಹಿಳೆಯರು ಹಾಗೂ ಉಳಿದ ಖೈದಿಗಳು ಸಾವನ್ನಪ್ಪಿದ್ದಾರೆ. ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಜೈಲಿನ ಸುತ್ತ ಸುತ್ತುವರಿದಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ