Publish Date: Mon, 26 Mar 2018 (07:04 IST)
Updated Date: Mon, 26 Mar 2018 (12:34 IST)
ವಿಜಯಪುರ : ವೀರಶೈವ-ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರದ ಕುರಿತಾಗಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮಹಿಳೆಯೊಬ್ಬರು ಧಮ್ ಇದ್ರೆ ವೀರಶೈವ ಸಮಾವೇಶಕ್ಕೆ ಬಂದು ಹೋಗಿ ಎಂದು ಸವಾಲೆಸಿದ್ದಾರೆ.
ದಿವ್ಯಾ ಹಾದರಗಿ ಎಂಬುವವರು ವಿಜಯಪುರದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿ,’ ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು ಬಂದರೂ ಅವರನ್ನು ಪಿಸ್ ಪಿಸ್ ಮಾಡುತ್ತೇವೆ. ಈ ಕೃತ್ಯ ಎಸಗಲು ನಾವು ಹೆದರಲ್ಲ. ನಮ್ಮಲ್ಲಿ ಎಷ್ಟು ಜನರನ್ನು ಬೇಕಾದ್ರೂ ಜೈಲಿಗೆ ಹಾಕಿ. ಪರ್ವಾಗಿಲ್ಲ. ಆದ್ರೆ ನಾವು ಅದನ್ನು ಮಾಡೇ ಮಾಡುತ್ತೇವೆ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ