Select Your Language

Notifications

webdunia
webdunia
webdunia
webdunia

ಪೊಲೀಸ್ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೆ ಯತ್ನ ಪ್ರಕರಣ

ಪೊಲೀಸ್ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೆ ಯತ್ನ ಪ್ರಕರಣ
ಚಿಕ್ಕಮಗಳೂರು , ಶನಿವಾರ, 24 ಮಾರ್ಚ್ 2018 (15:57 IST)
ರಕ್ಷಣೆ ನೀಡುವ ಪೊಲೀಸರಿಂದಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರೋ ಘಟನೆವೊಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ನಡೆದಿದೆ. 
ಎನ್.ಆರ್.ಪುರ ಪೊಲೀಸ್ ಠಾಣೆಯ ಎಎಸೈ ಕುಮಾರನಾಯ್ಕ ವಿರುದ್ಧ ಅತ್ಯಾಚಾರ ಯತ್ನ ಆರೋಪ ಕೇಳಿಬಂದಿದ್ದು ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ನಿನ್ನೆ ಕುಮಾರನಾಯ್ಕ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದ ಮನೆವೊಂದಕ್ಕೆ ಚುನಾವಣೆ ಕರ್ತವ್ಯ ದ ಗಸ್ತು ಬಂದಿರುವ ಬಗ್ಗೆ ಸಹಿ ಪಡೆಯಲು ಹೋಗಿದ್ದಾನೆ, ಈ ವೇಳೆ ಮನೆಯಲ್ಲಿ ಒಂಟಿ ಮಹಿಳೆ ಇದ್ದ ಕಾರಣ ಮಹಿಳೆವೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲದೆ ಅತ್ಯಾಚಾರಕ್ಕೂ ಯತ್ನ ಮಾಡಿದ್ದಾನೆ. 
 
ಈ ವೇಳೆ ಮಹಿಳೆ ಕಿರುಚಾಡಿದ ಹಿನ್ನೆಲೆ ಕುಮಾರ್ ನಾಯ್ಕ ಮನೆಯಿಂದ ಹೋಡಿ ಹೋಗಿದ್ದಾನೆ. ಈ ಸಂಬಂಧ ನೊಂದ ಮಹಿಳೆ ಕಳೆದ ರಾತ್ರಿ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ದೂರಿನ್ವಯ ಎನ್.ಆರ್.ಪುರ ಪೊಲೀಸರು ಸೆಕ್ಷನ್ 354ಎ, 324. 509, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಕುಮಾರನಾಯ್ಕ ನನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಲೂರು ಕಾಂಗ್ರೆಸ್ ಶಾಸಕ ವೈಎನ್ ರುದ್ರೇಶ್ ಗೌಡ ನಿಧನ