Select Your Language

Notifications

webdunia
webdunia
webdunia
webdunia

ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ
ಶ್ರೀಹರಿಕೋಟಾ , ಶುಕ್ರವಾರ, 18 ನವೆಂಬರ್ 2022 (14:53 IST)
ಶ್ರೀಹರಿಕೋಟಾ : ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಸಾಧನೆ ಮಾಡಿದ್ದು ದೇಶದ ಮೊದಲ ಖಾಸಗಿ ರಾಕೆಟ್ ಅನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ.
 
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್-ಎಸ್ ಹೆಸರಿನ ಖಾಸಗಿ ರಾಕೆಟ್ ಉಡಾವಣೆ ಮಾಡಲಾಗಿದೆ. ತೆಲಂಗಾಣ ಮೂಲದ ಟೆಕ್ ಸ್ಟಾರ್ಟ್ಅಪ್ ಸ್ಕೈರೂಟ್ ಏರೋಸ್ಪೇಸ್ನ ನಿರ್ಮಿಸಿದ್ದ ರಾಕೆಟ್ ಅನ್ನು ಇಸ್ರೋ ಉಡಾಯಿಸಿದೆ.

ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯುತ್ತಿದ್ದು ಭೂಮಿಯ ಕಕ್ಷೆಗೆ ಸೇರಿಸಲಿದೆ.

ವಿಕ್ರಮ್-ಎಸ್ ರಾಕೆಟ್ ಏಕ-ಹಂತದ ಉಪ-ಕಕ್ಷೆಯ ಉಡಾವಣಾ ವಾಹನವಾಗಿದ್ದು ಅದು 3 ಗ್ರಾಹಕ ಪೇಲೋಡ್ಗಳನ್ನು ಹೊತ್ತೊಯ್ಯುತ್ತದೆ ಮತ್ತು ವಿಕ್ರಮ್ ಸರಣಿಯ ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿನ ಹೆಚ್ಚಿನ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಕೀನಾ ಕಿಟಕಿ ಮೇಲೋ, ಶೂ ಬಾಕ್ಸ್ ನಲ್ಲಿ ಬಿಟ್ಟು ಹೊರಗೆ ಹೋಗ್ತಿರಾ? ಎಚ್ಚರ..!