Select Your Language

Notifications

webdunia
webdunia
webdunia
webdunia

ದಾಖಲೆಗಳನ್ನ ಉಡೀಸ್ ಮಾಡಿದ ರೆಡ್ ರಾಕೆಟ್ ಪರಿವಾಳ

Red Rocket Pariwala who broke records
bangalore , ಗುರುವಾರ, 11 ಆಗಸ್ಟ್ 2022 (20:19 IST)
ಪಕ್ಷಿಗಳು ಅಂದ್ರೆ ಎಲ್ಲರಿಗೂ  ಇಷ್ಟವಾಗುತ್ತೆ. ಆದ್ರಲ್ಲೂ ಪಕ್ಷಿ ಪ್ರೀಯರಿಗೆ ಅಂತೂ  ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಅಂದಹಾಗೆ ಹೀಗೆ ಸುಮಾರು ವರ್ಷದಿಂದ  ಬೆಂಗಳೂರಿನ ಶಂಕರ್ ಅವರು  ಪಾರಿವಾಳ ಸಾಕಿದ್ದಾರೆ. ಹೀಗೆ ಸಾಕುವಾಗ ಆಚಾನಕ್ಕಾಗಿ ಒಂದು ಪರಿವಾಳ ಸಿಗುತ್ತೆ. ಆ ಪರಿವಾಳವನ್ನ ಮನೆಯಲ್ಲಿ ಎಲ್ಲ ಪರಿವಾಳವಂತೆ ಸಾಕುತ್ತಾರೆ. ಆದ್ರೆ ಈ ಪರಿವಾಳ ಶಂಕರ್ ಅವರು ನಿರೀಕ್ಷೆಯೇ ಮಾಡದ ಮಟ್ಟಿಗೆ ದಾಖಲೆ ನಿರ್ಮಿಸುವ ಮೂಲಕ ಸಾಧನೆ ಮಾಡಿದೆ. ಅಂದಹಾಗೆ ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಶನ್  ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಒಟ್ಟು 26 ಪಾರಿವಾಳಗಳನ್ನ ಏಪ್ರಿಲ್ 16 ರಂದು  ದಿಲ್ಲಿ ಯಿಂದ ಹಾರಿಸಲಾಗಿತ್ತು. ಹಾಗೆ ಹಾರಿಸಿದ ಪರಿವಾಳಗಳಲ್ಲಿ ಶಂಕರ್ ರವರು ಸಾಕಿದ ರೆಡ್ ರಾಕೆಟ್ ಪರಿವಾಳ ಒಂದೇ  ಏಪ್ರಿಲ್ 24 ರಂದು ಬೆಂಗಳೂರಿಗೆ ಬಂದು ತಲುಪಿದೆ.
 
ಇದುವರೆಗೆ ಭಾರತದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೂರು ಕ್ರಮಿಸಿರುವ ಪಾರಿವಾಳ ಇದೆ ಮೊದಲು.ಹೀಗೆ ದಾಖಲೆ ಮೂರಿಯುವ ಮೂಲಕ ವಿಜಯ ಸಾಧಿಸಿದ ರೆಡ್ ರಾಕೆಟ್ ಪಾರಿವಾಳದ ಬಗ್ಗೆ ಎಲ್ಲೆಲ್ಲಿಯೂ ಪ್ರಶಾಂಸೆ ವ್ಯಕ್ತವಾಗ್ತಿದೆ. ಪ್ರತಿಬಾರಿಯೂ ದೆಹಲಿಯಲ್ಲಿ  ರೇಸ್  ಆಯೋಜಿಸಲಾಗ್ತಿದೆ. ಆ ರೇಸ್ ನಲ್ಲಿ ಹಲವು ಪರಿವಾಳವನ್ನ ಹಾರಿಬಿಡಲಾಗುತ್ತೆ . ಹಾಗೆ ಬಿಡುವ ಪರಿವಾಳಗಳು ಹೇಗೆ ಅತಿವೇಗವಾಗಿ ಓಡಿ ಸಾಧನೆ ಮಾಡುತ್ತೆ ಅನ್ನುವುದೇ ಪ್ರಶ್ನೆ . ಹೀಗೆ ಹಲವು ಕಂಪನಿಗಳ ಪರಿವಾಳಗಳು ರೇಸ್ ಸ್ಪರ್ಧೇಯಲ್ಲಿ ಭಾಗವಹಿಸುತ್ತದೆ.ಹಾಗೆ ಭಾಗವಹಿಸಿದ ಪರಿವಾಳಗಳಲ್ಲಿ ರೆಡ್ ರಾಕೆಟ್ ಪರಿವಾಳ ಕೇವಲ 9 ದಿನದಲ್ಲಿ ಬೆಂಗಳೂರಿನ ಕೊರಮಂಗಲದ ತನ್ನ ಗುಡಿಗೆ ಸೇರಿಕೊಂಡು ಹೊಸ ದಾಖಲೆ ಸೃಷ್ಠಿ ಮಾಡಿದೆ. ಇನ್ನು ರೆಡ್ ರಾಕೆಟ್ ಪರಿವಾಳ ಮರಳಿ ತನ್ನ ಗುಡು ಸೇರಿರುವುದರ ಬಗ್ಗೆ ರೆಡ್ ರಾಕೆಟ್ ಪರಿವಾಳದ ಶಂಕರ್ ಖುಷಿ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ 541 ಪಿಯು ಕಾಲೇಜುಗಳಲ್ಲಿ ಈ ವರ್ಷ ಶೂನ್ಯ ದಾಖಲಾತಿ