Select Your Language

Notifications

webdunia
webdunia
webdunia
webdunia

ಆರ್ಟೆಮಿಸ್-1 ರಾಕೆಟ್ ಲಾಂಚಿಂಗ್ ಸ್ಥಗಿತ!

ಆರ್ಟೆಮಿಸ್-1 ರಾಕೆಟ್ ಲಾಂಚಿಂಗ್ ಸ್ಥಗಿತ!
ವಾಷಿಂಗ್ಟನ್ , ಮಂಗಳವಾರ, 30 ಆಗಸ್ಟ್ 2022 (11:14 IST)
ವಾಷಿಂಗ್ಟನ್ : ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ನಾಸಾ ರಾಕೆಟ್ ಉಡಾವಣೆಯನ್ನು ಸ್ಥಗಿತಗೊಳಿಸಿದೆ.

322 ಅಡಿ ಎತ್ತರದ ರಾಕೆಟ್ ಅನ್ನು ಇಂದು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದೆ. 

ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಇಂದು ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆರ್ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇಂಜಿನಿಯರ್ಗಳು ಅದನ್ನು ಪತ್ತೆಹಚ್ಚಿದ್ದಾರೆ. ತಂಡಗಳು ಡೇಟಾ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದು, ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುತ್ತೇವೆ ಎಂಬುದಾಗಿ ಟ್ವೀಟ್ ಮೂಲಕ ತಿಳಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ