Select Your Language

Notifications

webdunia
webdunia
webdunia
webdunia

ನ್ಯೂಕ್ಲಿಯರ್ ಘಟಕದ ಮೇಲೆ ರಾಕೆಟ್ ದಾಳಿ!

ನ್ಯೂಕ್ಲಿಯರ್ ಘಟಕದ ಮೇಲೆ ರಾಕೆಟ್ ದಾಳಿ!
ಉಕ್ರೇನ್ , ಶನಿವಾರ, 13 ಆಗಸ್ಟ್ 2022 (15:27 IST)
ಕೈವ್ : ಉಕ್ರೇನಿನ ಝಪೋರಿಝ್ಯಾ ಪರಮಾಣು ವಿದ್ಯುತ್ ಸ್ಥಾವರದ ಸಮೀಪವೇ ರಷ್ಯಾ ರಾಕೆಟ್ ದಾಳಿ ನಡೆಸಿದ್ದು, 14 ಜೀವಗಳು ಬಲಿಯಾಗಿರುವ ದಾರುಣ ಘಟನೆ ನಡೆದಿದೆ.

ರಷ್ಯಾ ಮೇಲಿನ ನಿಯಂತ್ರಣವು ಇತರ ದೇಶಗಳಿಗೂ ಅಪಾಯವನ್ನುಂಟುಮಾಡುತ್ತವೆ ಎಂದು ಉ7 ರಾಷ್ಟ್ರಗಳು ಎಚ್ಚರಿಸಿವೆ.

ರಷ್ಯಾ-ಉಕ್ರೇನ್ ದಾಳಿ ನಡೆಸುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ ಉಭಯ ದೇಶಗಳು ಪರಮಾಣು ಘಟಕದ ಸುರಕ್ಷತೆ ಹಾಗೂ ಭದ್ರತೆಗೆ ಗಮನ ನೀಡಬೇಕು ಎಂದು ಕರೆ ನೀಡಿದೆ.

ಈ ಸಂಬಂಧ ಚರ್ಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿನ್ನೆಯಷ್ಟೇ ತುರ್ತು ಸಭೆ ಕರೆದಿತ್ತು. ಈ ವೇಳೆ ವಿಶ್ವಸಂಸ್ಥೆಯು ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್, ಪರಮಾಣು ಘಟಕದ ಸುರಕ್ಷತೆ ಮತ್ತು ಭದ್ರತೆ ಉದ್ದೇಶದಿಂದ ಘಟಕದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಉಭಯ ದೇಶಗಳ ದಾಳಿಯಿಂದ ಉಂಟಾಗುವ ಯಾವುದೇ ಹಾನಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ರಷ್ಯಾ ರಾಕೆಟ್ ದಾಳಿಯಿಂದ 14 ಮಂದಿ ದುರ್ಮರಣಕ್ಕೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಅಭಿವೃದ್ಧಿಗೆ ಶ್ರಮಿಸೋಣ : ಗೆಹ್ಲೋಟ್