Select Your Language

Notifications

webdunia
webdunia
webdunia
webdunia

ಮನೆ ಕೀನಾ ಕಿಟಕಿ ಮೇಲೋ, ಶೂ ಬಾಕ್ಸ್ ನಲ್ಲಿ ಬಿಟ್ಟು ಹೊರಗೆ ಹೋಗ್ತಿರಾ? ಎಚ್ಚರ..!

Do you leave your kina on the windowsill
bangalore , ಶುಕ್ರವಾರ, 18 ನವೆಂಬರ್ 2022 (14:44 IST)
ಮನೆ ಕೀ ನಾ ಮನೆ ಮೇಲೋ ಶೋ ಬಾಕ್ಸ್ ನಲ್ಲೋ ಇಡುವ ಮುನ್ನ ಎಚ್ಚರವಾಗಿರಿ.ಕೀ  ಇಟ್ಟಿರೋದು ಅಕ್ಕಪಕ್ಕವರಿಗೆ ಹೇಳಿ ಹೋಗೋಕು ಮುನ್ನ ಎಚ್ಚರ ಇಲ್ಲವಾದ್ರೆ ಅಪಾಯ ಕಟ್ಟಿಟ್ಟಬುತ್ತಿ.ಯಾಕಂದ್ರೆ ಕೀ ಮನೆ ಹೊರಗೆ ಇಟ್ಟು ಹೋದ್ರೆ ನಿಮ್ಮ ಮನಗೆ ಕನ್ನ ಹಾಕ್ತಾರೆ ಚಾಲಕಿ ಕಳ್ಳರು. 
 
ಮನೆಯಲ್ಲಿ 250 ಗ್ರಾಂ ಕಳುವಾಗಿದ ಚಿನ್ನ ಎರಡೇ ಗಂಟೇಲಿ ಪತ್ತೆಯಾಗಿದೆ.ಆದ್ರೆ ಕಳ್ಳ ಮಾತ್ರ ನಾಪತ್ತೆಯಾಗಿದ್ದಾನೆ.ಇಂತಹದೊಂದು ಘಟನೆ ತಿಲಕ್‌ನಗರ ಠಾಣ ವ್ಯಾಪ್ತಿಯಲ್ಲಿ ‌ನಡೆದಿದೆ.ತಿಲಕ್‌ನಗರದ‌ ಡಿ‌ಮಾರ್ಟ್ ಪಕ್ಕದ ಸ್ಲಂ ಬೋರ್ಡ್ ಅಪಾರ್ಟ್ಮೆಂಟ್ ನಲ್ಲಿ ಕಳ್ಳತನವಾಗಿದೆ. ಅಂಬಿಕ ಅನ್ನೋರ‌ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು. ಮನೆ ಲಾಕ್ ಮಾಡಿ ಕೀಯನ್ನ ಅಂಬಿಕ ಶೂನಲ್ಲಿ‌ಇಟ್ಟು ಹೋಗಿದ್ರು. ನಂತರ ಮನೆಗ ಬಂದಾಗ ಶೂ ನಲ್ಲಿ ಕೀ ಇರ್ಲಿಲ್ಲ. ಕೀ ಹುಡುಕಾಡಿದಾಗ ನೆರೆ ಮನೆಯವರು ಕೀ ಹುಡುಕಿ ಕೊಟ್ಟಿದ್ರು.‌ಮನೆಯೊಳಗೆ ಲಾಕರ್ ಚೆಕ್ ಮಾಡಿದ  ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು ಎಂದು ತಿಲಕ್ ನಗರ ಪೊಲೀಸರಿಗೆ ಅಂಬಿಕಾ ದೂರು ನೀಡಿದರು.
 
ಡಾಗ್ ಸ್ಕ್ವಾಡ್, ಫ್ರಿಂಗರ್ ಪ್ರಿಂಟ್ ಟೀಂ ಸಮೇತ ಪೊಲೀಸರು ಎಂಟ್ರಿ ಕೊಟ್ಟಿದ್ರು.ತಲಾಷ್ ಮಾಡಿದ ಪೋಲಿಸರಿಗೆ ಪಕ್ಕದ ಮನೆಯ ಹತ್ತಿರ ಒಂದು ಗಂಟು ಸಿಕ್ಕಿದೆ.ಗಂಟಿನ ಲ್ಲಿ ಚಿನ್ನ ಸಿಕ್ಕಿದೆ ಆದ್ರೇ ಕಳ್ಳ ‌ಮಾತ್ರ ನಾಪತ್ತೆಯಾಗಿದ್ದು, ಪೋಲೀಸರ ಬೇಟೆ ಕೂಡ ಮುಂದುವರಿದಿದೆ.ಯಾವುದಕ್ಕೂ ನೀವು ಕೀ ಇಡೋ ಮುನ್ನ ಒಂದ್ಸಾರಿ ಯೋಚನೆ ಮಾಡಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಟೈಟು..ಟೈಟು..ಆಶಿಕಾ ಫುಲ್ ಟೈಟ್..!