Select Your Language

Notifications

webdunia
webdunia
webdunia
webdunia

ಬಲಿಗಾಗಿ ಕಾದುಕುಳಿತ ಯಾಮಸ್ವರೂಪಿ ರಸ್ತೆಗುಂಡಿಗಳಿಗಿಲ್ಲ ಮುಕ್ತಿ..!

ಬಲಿಗಾಗಿ ಕಾದುಕುಳಿತ ಯಾಮಸ್ವರೂಪಿ ರಸ್ತೆಗುಂಡಿಗಳಿಗಿಲ್ಲ ಮುಕ್ತಿ..!
bangalore , ಶುಕ್ರವಾರ, 18 ನವೆಂಬರ್ 2022 (14:21 IST)
ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರು ರಸ್ತೆಗುಂಡಿಗಳು ಕಾಣಸಿಗುತ್ತವೆ. ಈ ರಸ್ತೆಗುಂಡಿಗಳಿಂದ ವಾಹನಸವಾರರು ರೋಸಿ ಹೋಗಿದ್ದಾರೆ.ಇನ್ನೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿಗಳ  ಸಂಖ್ಯೆ ಹೆಚ್ಚಾಗುತ್ತಿದೆ.
 
ಮಾದೇಶ್ವರ ನಗರದಲ್ಲಂತೂ ರಸ್ತೆಯುದ್ದಕ್ಕೂ ಗುಂಡಿಗಳ ಸರಮಾಲೆಯೇ ಇದೆ.ಸುಂಕದಕಟ್ಟೆ ಬಳಿಯಿರುವ ಮಾದೇಶ್ವರ ನಗರ ಮುಖ್ಯ ರಸ್ತೆಯೇ ಸಂಪೂರ್ಣ ಗುಂಡಿಮಯವಾಗಿದೆ.ವಾಹನ  ಓಡಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ.ಅದೆಷ್ಟೋ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.
 
ಇಷ್ಟೆಲ್ಲಾ ಆದರೂ ಬಿಬಿಎಂ ಯಾವುದೇ ಕ್ರಮ ಕೈಗೊಂಡಿಲ್ಲ .ಇನ್ನೂ ಅದೆಷ್ಟು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತೀರಾ? ಎಂದು ಸಾರ್ವಜನಿಕರು ಬಿಬಿಎಂಪಿ ಗೆ ಹಿಡಿಶಾಪ ಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ! 7 ಮಕ್ಕಳು ಸೇರಿ 21 ಸಾವು