Select Your Language

Notifications

webdunia
webdunia
webdunia
webdunia

ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ! 7 ಮಕ್ಕಳು ಸೇರಿ 21 ಸಾವು

ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ! 7 ಮಕ್ಕಳು ಸೇರಿ 21 ಸಾವು
ಜೆರುಸಲೆಮ್ , ಶುಕ್ರವಾರ, 18 ನವೆಂಬರ್ 2022 (12:11 IST)
ಜೆರುಸಲೆಮ್ : ನಿರಾಶ್ರಿತರ ಶಿಬಿರದಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 7 ಮಕ್ಕಳು ಸೇರಿದಂತೆ 21 ಜನರು ಸಜೀವದಹನಗೊಂಡಿರುವ ಘಟನೆ ಇಸ್ರೇಲ್ನ ಗಾಜಾ ಪಟ್ಟಿಯಲ್ಲಿ ನಡೆದಿದೆ.

ಗಾಜಾದ ಜನನಿಬಿಡ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಹೊತ್ತಿಕೊಂಡಿದೆ. 4 ಅಂತಸ್ತಿನ ವಸತಿ ಕಟ್ಟಡದ ಮೇಲಿನ ಮಹಡಿ ಸ್ಫೋಟಗೊಂಡಿದ್ದು, ಭಾರೀ ಬೆಂಕಿ ಉಂಟಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು 1 ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆಯ ಪ್ರಕಾರ ಕಟ್ಟಡದೊಳಗೆ ಹೆಚ್ಚಿನ ಪ್ರಮಾಣದ ಗ್ಯಾಸೋಲಿನ್ ಅನ್ನು ಸಂಗ್ರಹಿಸಲಾಗಿದ್ದು, ಇದು ಬೆಂಕಿಯ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಕಟ್ಟಡದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಯಾರೊಬ್ಬರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಬೇಕಾಗಿಲ್ಲ?