Publish Date: Sun, 07 Jun 2020 (09:19 IST)
Updated Date: Sun, 07 Jun 2020 (09:21 IST)
ನವದೆಹಲಿ: ಕೇರಳದಲ್ಲಿ ಮೊನ್ನೆಯಷ್ಟೇ ಗರ್ಭಿಣಿ ಆನೆಗೆ ಸ್ಪೋಟಕ ತಿನಿಸಿ ಹತ್ಯೆ ಮಾಡಿದ ಕ್ರೂರ ಘಟನೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಅಂತಹದ್ದೇ ಒಂದು ಘಟನೆ ನಡೆದಿರುವ ಬಗ್ಗೆ ಹಿಮಾಚಲಪ್ರದೇಶದಲ್ಲಿ ವರದಿಯಾಗಿದೆ.
ಗರ್ಭಿಣಿ ಪಶುವಿನ ಬಾಯಿಗೆ ಸ್ಪೋಟಕ ತುಂಬಿ ಅದು ಸಿಡಿದು ಮೂಕಪ್ರಾಣಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇದೀಗ ದನದ ಮಾಲಿಕ ತನ್ನ ಪಕ್ಕದ ಮನೆಯಾತ ಈ ಕೃತ್ಯವೆಸಗಿದ್ದಾನೆಂದು ದೂರು ನೀಡಿದ್ದಾರೆ.
ಈ ಘಟನೆ 10 ದಿನಗಳ ಹಿಂದೆಯೇ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಈಗ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.