Select Your Language

Notifications

webdunia
webdunia
webdunia
webdunia

ಭಾರತದ ವಿರುದ್ಧ ಕಿಡಿ ಕಾರುತ್ತಿದ್ದ ಪಾಕ್ ಮಾಜಿ ಸಚಿವ ರೆಹಮಾನ್ ಮಲಿಕ್ ವಿರುದ್ಧ ಅತ್ಯಾಚಾರ ಆರೋಪ

ಭಾರತದ ವಿರುದ್ಧ ಕಿಡಿ ಕಾರುತ್ತಿದ್ದ ಪಾಕ್ ಮಾಜಿ ಸಚಿವ ರೆಹಮಾನ್ ಮಲಿಕ್ ವಿರುದ್ಧ ಅತ್ಯಾಚಾರ ಆರೋಪ
ಇಸ್ಲಾಮಾಬಾದ್ , ಶನಿವಾರ, 6 ಜೂನ್ 2020 (09:56 IST)
ಇಸ್ಲಾಮಾಬಾದ್: ಭಾರತದ ವಿರುದ್ಧ ಸದಾ ಅಸಂಬದ್ಧ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಹಾಲಿ ವಿರೋಧ ಪಕ್ಷ ಪಿಪಿಪಿ ನಾಯಕರಾಗಿರುವ ರೆಹಮಾನ್ ಮಲಿಕ್ ವಿರುದ್ಧ ಅಮೆರಿಕನ್ ಪತ್ರಕರ್ತೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.


ಅಮೆರಿಕಾ ಪತ್ರಕರ್ತೆ ಸಿಂಥಿಯಾ ಡಿ ರಿಚೀ ಎಂಬ ಮಹಿಳೆ ರೆಹಮಾನ್ ಮಲಿಕ್ ತನನ್ ಮೇಲೆ 2011 ರಲ್ಲಿ ಅತ್ಯಾಚಾರವೆಸಗಿದ್ದಾಗಿ ಆರೋಪಿಸಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ ಯೂಸಫ್ ರಾಜಾ ಗಿಲಾನಿ ಮತ್ತು ಮಾಜಿ ಆರೋಗ್ಯ ಸಚಿವ ಮಖದೂಮ್ ಶಹಬುದ್ದೀನ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು ಎಂದೂ ಆರೋಪಿಸಿದ್ದಾರೆ.

ಫೇಸ್ ಬುಕ್ ವಿಡಿಯೋದಲ್ಲಿ ಸಿಂಥಿಯಾ ಇಂತಹದ್ದೊಂದು ಆರೋಪ ಮಾಡಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗಿದೆ. ಅಷ್ಟೇ ಅಲ್ಲ ಇದಕ್ಕೆ ತಕ್ಕ ಸಾಕ್ಷ್ಯವೂ ತನ್ನ ಬಳಿ ಇದೆ ಎಂದು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಸೋಂಕಿತರ ಸಂಖ್ಯೆ 2,36,184ಕ್ಕೇರಿಕೆ